ಬೆಂಗಳೂರು: ಬೀದಿನಾಯಿಯೊಂದು ನಾಪತ್ತೆಯಾಗಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನ ಕಲ್ಯಾಣ ನಗರದಲ್ಲಿ ನಡೆದಿದೆ.
ಹೆಚ್ ಎರ್ ಬಿ ಆರ್ ಲೇಔಟ್ ನಿವಾಸಿ ಡಾ.ಪುನೀತಾ ರಂಗಸ್ವಾಮಿ ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಡಾ.ಪುನೀತಾ ಎಂಬ ಮಹಿಳೆ ಅನಿಲ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಬೀದಿನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟುಬಂದಿದ್ದಾರೆ ಎಂದು ಆರೋಪಿ ಅನಿಲ್ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
ಹೆಚ್ ಆರ್ ಬಿ ಆರ್ ಲೇಔಟ್ ನ ಎರಡನೇ ಬ್ಲಾಕ್ ನಲ್ಲಿದ್ದ 7ತಿಂಗಳ ನಾಯಿಗೆ ಪುನೀತಾ 2 ತಿಂಗಳೀಂದ ನಿತ್ಯವೂ ಊಟ ಹಾಕುತ್ತಿದ್ದರಂತೆ. ಪುನೀತಾ ಅವರ ಮನೆ ಮುಂದೆ ಕಾವಲಾಗಿ ನಾಯಿ ಇರುತ್ತಿತ್ತಂತೆ ಡಿ.14ರಂದು ನಾಯಿ ಬಿಸ್ಕೆಟ್ ತಿಂದು, ನೀರು ಕುಡಿದು ಮನೆ ಮುಂದೆ ಮಲಗಿತ್ತು. ಆದರೆ ಡಿ.15ರದು ಬೆಳಿಗ್ಗೆ ನೋಡಿದರೆ ನಾಯಿ ನಾಪತ್ತೆಯಾಗಿದೆ. ನಾಯಿ ಪತ್ತೆ ಮಾಡಲು ಪುನೀತಾ ಮನೆ ಬಳಿ ಇದ್ದ ಅನಿಲ್ ಅವರ ಸಿಸಿಟಿವಿ ಪುಟೇಜ್ ನೀಡಲು ಕೇಳಿದ್ದಾರೆ. ಆದರೆ ಅನಿಲ್ ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಅನಿಲ್ ಮೇಲೆ ಅನುಮಾನವಿದ್ದು, ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.