ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಶಾಂತಿಯುತವಾಗಿ ಮಲಗಿದ್ದ ನಾಯಿಯನ್ನು ಕಂಡು ಆಶ್ಚರ್ಯಚಕಿತರಾದ ಅತಿಥಿಯೊಬ್ಬರು ತಮ್ಮ ಅನುಭವ ಮತ್ತು ಈ ಬಗ್ಗೆ ಹೋಟೆಲ್ ನಲ್ಲಿನ ನಿಯಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ರತನ್ ಟಾಟಾ ಅವರ ಬಗ್ಗೆ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವ ಸಂಪನ್ಮೂಲ ವೃತ್ತಿಪರರೊಬ್ಬರು ತಾಜ್ ಹೋಟೆಲ್ ನಲ್ಲಿ ಮಲಗಿದ್ದ ನಾಯಿ ಕಂಡು ಇದರ ವಿಷಯ ತಿಳಿದ ನಂತರ ರತನ್ ಟಾಟಾ ಅವರು ಜ್ಞಾನ ಮತ್ತು ಹೃದಯದ ಸಮತೋಲನವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.
ರೂಬಿ ಖಾನ್ ಅವರು ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ, ತಾಜ್ ಮಹಲ್ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಶಾಂತಿಯುತವಾಗಿ ಮಲಗಿದ್ದ ನಾಯಿಯನ್ನು ಗಮನಿಸಿದ್ದೆ. ಅದು ನಿರಾತಂಕವಾಗಿ ಆರಾಮಾಗಿ ನಿದ್ರಿಸುತ್ತಿತ್ತು. ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ರೀತಿ ನಾಯಿ ಮಲಗಿದ್ದನ್ನ ಕಂಡು ಅಚ್ಚರಿಯಿಂದ ಹೋಟೆಲ್ ಸಿಬ್ಬಂದಿಯನ್ನು ಕೇಳಿದಾಗ ಅವರು ನಾಯಿ ಹುಟ್ಟಿನಿಂದಲೂ ಹೋಟೆಲ್‌ನ ಭಾಗವಾಗಿದೆ ಎಂದು ತಿಳಿಸಿದರು.
“ಈ ಪ್ರಾಣಿಗಳು ಆವರಣಕ್ಕೆ ಪ್ರವೇಶಿಸಿದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲು ರತನ್ ಟಾಟಾ ಅವರಿಂದ ಕಟ್ಟುನಿಟ್ಟಾದ ಸೂಚನೆಗಳಿವೆ” ಎಂದು ರೂಬಿ ಖಾನ್ ಗೆ ಸಿಬ್ಬಂದಿ ತಿಳಿಸಿದ್ದಾರೆ. ಈ ವಿವರಣೆಯಿಂದ ಆಶ್ಚರ್ಯಚಕಿತರಾದ ರೂಬಿ, ತಾಜ್ ಮಹಲ್ ಹೋಟೆಲ್ “ಅದರ ಗೋಡೆಗಳೊಳಗಿನ ಪ್ರತಿಯೊಂದು ಜೀವಿಗಳನ್ನು ಗೌರವಿಸುತ್ತದೆ” ಎಂದು ಹೇಳಿದ್ದಾರೆ.
“ಅಂತಹ ಪ್ರತಿಷ್ಠಿತ ಹೋಟೆಲ್ ನ ಪ್ರವೇಶವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ಅಲ್ಲಿ ನಾಯಿ ಶಾಂತಿಯುತವಾಗಿ ಮಲಗಿತ್ತು. ಈ ಘಟನೆಯು ತನಗೆ ಗಹನವಾದ ಸತ್ಯವನ್ನು ಎತ್ತಿ ತೋರಿಸಿದೆ. ಮುಂಚೂಣಿಯಲ್ಲಿರುವ ಮತ್ತು ಗ್ರಾಹಕರ ಗೀಳನ್ನು ಹೊಂದಿರುವ ವ್ಯಾಪಾರದ ಮಧ್ಯೆ ವ್ಯವಹಾರದ ನಿಜವಾದ ಆತ್ಮವು ಇತರರನ್ನು ಹೇಗೆ ಪರಿಗಣಿಸುತ್ತದೆ ಎಂಬುದರಲ್ಲಿ ಪ್ರತಿಫಲಿಸುತ್ತದೆ. ನಾವು ಆಗಾಗ್ಗೆ ಸೇರ್ಪಡೆ, ಪಕ್ಷಪಾತಗಳು, ಮಾನಸಿಕ ಸುರಕ್ಷತೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯ ಬಗ್ಗೆ ಮಾತನಾಡುತ್ತೇವೆ. ಈ ಎಲ್ಲಾ ತತ್ವಗಳನ್ನು ನಾನು ಇಲ್ಲಿ ಕಾರ್ಯರೂಪಕ್ಕೆ ತಂದಿರುವುದನ್ನು ನೋಡಿದ್ದೇನೆ. ಇದು ಜ್ಞಾನ ಮತ್ತು ಹೃದಯದ ಉತ್ತಮ ಸಮತೋಲನವಾಗಿದೆ. ಇತರರು ಈ ಹೋಟೆಲ್ ಪ್ರವೇಶಿಸಿದಾಗ ಅವರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ರತನ್ ಟಾಟಾ ಅವರು ಯಶಸ್ವಿ ಉದ್ಯಮಿಯಾಗಿರುವುದರಿಂದ ಎಲ್ಲರನ್ನೂ ಗೌರವಿಸುವುದನ್ನು ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಇದು ತನ್ನನ್ನು ತಾನು ನಂಬುವುದು ಮತ್ತು ಪ್ರತಿದಿನ ಆ ನಂಬಿಕೆಯನ್ನು ಜೀವಿಸುವುದು.” ಎಂದು ಸುದೀರ್ಘ ಪೋಸ್ಟ್ ಮಾಡಿದ್ದಾರೆ.
ಈ ಘಟನೆಯು ಸಾಕುಪ್ರಾಣಿಗಳನ್ನು ಖರೀದಿಸುವುದು ಮತ್ತು ದತ್ತು ತೆಗೆದುಕೊಳ್ಳುವುದರ ಬಗ್ಗೆ ಚರ್ಚೆಯನ್ನು ನೆನಪಿಸಿತು ಎಂದ ರೂಬಿ ಇದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ ಎಂದಿದ್ದಾರೆ.
ರೂಬಿ ಪೋಸ್ಟ್ ಗೆ ಪ್ರತಿಕ್ರಿಯಿಸಿದತಾಜ್ ಹೋಟೆಲ್ ಧನ್ಯವಾದ ತಿಳಿಸಿದೆ. ಹಾಯ್ ರೂಬಿ, ಈ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ತಾಜ್‌ನಲ್ಲಿ, ನಾವು ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯನ್ನು ಗೌರವಿಸುತ್ತೇವೆ, ಪ್ರತಿಯೊಬ್ಬ ಅತಿಥಿಯು ಮನೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ಅನುಭವದ ಅಭಿವ್ಯಕ್ತಿ ನಮ್ಮ ಪ್ರಮುಖ ಮೌಲ್ಯಗಳೊಂದಿಗೆ ನಿಜವಾಗಿಯೂ ಪ್ರತಿಧ್ವನಿಸುತ್ತವೆ” ಎಂದು ಹೇಳಿದೆ.
ತಾಜ್‌ನ ಮಾಜಿ ಉದ್ಯೋಗಿಗಳು ಮತ್ತು ನೆಟಿಜನ್‌ಗಳು ರೂಬಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು ರತನ್ ಟಾಟಾರ ಎಲ್ಲಾ ಆಸ್ತಿಗಳು ಒಂದೇ ಶಿಸ್ತನ್ನು ಅನುಸರಿಸುತ್ತವೆ ಎಂದು ಹಂಚಿಕೊಂಡಿದ್ದಾರೆ.