ಸ್ಟ್ರಾಬೆರಿ ತುಂಬಾ ರುಚಿಕರವಾದ ಹಣ್ಣು. ನೋಡಲು ಸಹ ಅತ್ಯಂತ ಆಕರ್ಷಕವಾಗಿದೆ. ಅದರ ಹುಳಿ-ಸಿಹಿ ರುಚಿ ನಮ್ಮನ್ನು ಆಕರ್ಷಿಸುತ್ತದೆ. ಸ್ಟ್ರಾಬೆರಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಬಲ್ಲದು.
ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಎಂಟಿಒಕ್ಸಿಡೆಂಟ್‌ಗಳು, ಉರಿಯೂತ ನಿವಾರಕ ಅಂಶ, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿಯೇ ಇದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲದು. ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಚಿಕಿತ್ಸಕ ಮತ್ತು ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳು ಸ್ಟ್ರಾಬೆರಿಗಳಲ್ಲಿ ಕಂಡುಬರುತ್ತವೆ. ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಸಿ ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ ಮತ್ತು ಅದರಲ್ಲಿ ಕಿಣ್ವಗಳ ರಚನೆಯನ್ನು ತಡೆಯುತ್ತದೆ.
ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿ ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಪಾಲಿಫಿನಾಲ್ ಸಂಯುಕ್ತಗಳಿರುವುದರಿಂದ ಇವು ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿಯಾಗಬಲ್ಲವು.
ಸ್ಟ್ರಾಬೆರಿ ಫೈಬರ್ ಜೊತೆಗೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಉತ್ತಮ ಪ್ರಮಾಣದ ನೀರನ್ನು ಹೊಂದಿರುತ್ತದೆ. ಹಾಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸ್ಟ್ರಾಬೆರಿಗಳನ್ನು ಹೇಗೆ ಸೇವಿಸಬೇಕು?
ಆರೋಗ್ಯ ತಜ್ಞರ ಪ್ರಕಾರ ಸ್ಟ್ರಾಬೆರಿಗಳನ್ನು ಸಲಾಡ್ ಅಥವಾ ಮೊಸರಿನೊಂದಿಗೆ ತಿನ್ನಬಹುದು. ಇದಲ್ಲದೆ ಅವುಗಳನ್ನು ಬೆಳಗಿನ ಉಪಾಹಾರದ ಸಮಯದಲ್ಲಿ ಕಾರ್ನ್‌ಫ್ಲೇಕ್ಸ್ ಅಥವಾ ಓಟ್ಸ್‌ಗೆ ಸೇರಿಸಬಹುದು. ಈ ಹಣ್ಣನ್ನು ನೇರವಾಗಿ ಕೂಡ ತಿನ್ನಬಹುದು. ಕೆಲವರು ಸ್ಟ್ರಾಬೆರಿ ಮಿಲ್ಕ್ ಶೇಕ್ ಅಥವಾ ಸ್ಮೂಥಿಗಳನ್ನು ಕುಡಿಯುತ್ತಾರೆ. ಆದರೆ ಹಣ್ಣಿನ ಜೊತೆಗೆ ಸಕ್ಕರೆಯನ್ನು ಬೆರೆಸಬೇಡಿ. ಸಕ್ಕರೆಯನ್ನು ಬೆರೆಸಿದರೆ ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯ ಬರಬಹುದು.