ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಒಬ್ಬೊಬ್ಬರೇ ಓಡಾಡುವುದು ಎಲ್ಲಾ ಸಮಯದಲ್ಲೂ ಸುರಕ್ಷಿತವಲ್ಲ ಎಂಬುದು ಬಹಳ ಬಾರಿ ಅರಿವಿಗೆ ಬರುತ್ತಲೇ ಇರುತ್ತದೆ.
ರೈಲಿನಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವೇಳೆ ನಿದ್ರೆ ಮಾಡುತ್ತಿದ್ದ ತನ್ನತ್ತ ಸಹೃದಯ ಭಾವ ತೋರಿದ ಸಹ ಪ್ರಯಾಣಿಕರೊಬ್ಬರ ಕಥೆಯನ್ನು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಲಂಡನ್‌ಗೆ ಮರಳುವ ನನ್ನ ನಾಲ್ಕು ಗಂಟೆಗಳ ಪ್ರಯಾಣದ ವೇಳೆ ನನಗೆ ನಿದ್ರೆ ಬಂದಿತ್ತು. ಜೋರಾಗಿ ನಿದ್ರೆ ಮಾಡಿಬಿಟ್ಟಿದ್ದೆ. ಟೇಬಲ್ ಸೀಟ್ ಮೇಲೆ ಮಲಗಿದ್ದ ನಾನು ನನ್ನ ಬ್ಯಾಗು ಹಾಗೂ ಮೊಬೈಲ್‌ಅನ್ನು ಟೇಬಲ್ ಮೇಲೆ ಬಿಟ್ಟು ಮಲಗಿದ್ದೆ. ನನ್ನ ಏರ್‌ಪಾಡ್‌ಗಳು ಕಿವಿಯಲ್ಲೇ ಇದ್ದವು. ಯೂಸ್ಟನ್ ಬರುತ್ತಿದ್ದಂತೆ ಎದ್ದ ನಾನು, ನನ್ನ ಬೋಗಿಯಲ್ಲಿ ಕುಡಿತದ ನಶೆಯಲ್ಲಿ ತೇಲುತ್ತಿದ್ದ ದಾಂಧಲೆಕೋರರ ನಡುವೆ ಒಬ್ಬ ವ್ಯಕ್ತಿಯನ್ನು ಕಂಡೆ. ಆತ ನನ್ನ ಎದುರಿನ ಟೇಬಲ್ ಸೀಟ್ ಮೇಲೆ ಕುಳಿತುಕೊಂಡಿದ್ದರು. ನನ್ನ ವಸ್ತುಗಳೆಲ್ಲಾ ಇಲ್ಲಿಯೇ ಇರುವವೇ? ಆತ ನನ್ನ ವಿಡಿಯೋ ಮಾಡುತ್ತಿದ್ದಾನೆಯೇ ಎಂದೆಲ್ಲಾ ನನ್ನ ಮನಸ್ಸು ಲೆಕ್ಕಾಚಾರ ಮಾಡುತ್ತಿತ್ತು,’’ ಎಂದ ಮಹಿಳೆ, “ಬಹುತೇಕ ಖಾಲಿ ಇದ್ದ ಬೋಗಿಯಲ್ಲಿ ಹುಡುಗಿಯೊಬ್ಬಳ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳಲು ವ್ಯಕ್ತಿಯೊಬ್ಬ ಬಂದಿದ್ದಾನೆ ಎಂದುಕೊಂಡಿದ್ದೆ,” ಎಂದಿದ್ದಾರೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲಿ ಏರಿಕೆ; 24 ಗಂಟೆಯಲ್ಲಿ 379 ಜನ ಮಹಾಮಾರಿಗೆ ಬಲಿ
“ನಿನಗೆ ಸಿಟ್ಟು ಬರಿಸಲು ನಾನು ಹೀಗೆ ಮಾಡಿಲ್ಲ. ಸುತ್ತ ಏನಾಗುತ್ತಿದೆ ಎಂದು ನೋಡದೇ ನೀನು ನಿದ್ರೆ ಮಾಡಬಾರದಿತ್ತು ಎಂದ ಆತ ನಾನು ಸುರಕ್ಷಿತವಾಗಿ ನಿದ್ರೆ ಮಾಡುವುದನ್ನು ಖಾತ್ರಿ ಪಡಿಸಲು ಅಲ್ಲಿಯೇ ಕುಳಿತಿದ್ದ,” ಎಂದಿದ್ದಾರೆ ಈ ಮಹಿಳೆ.
ವೈರಲ್ ಆಗಿರುವ ಈ ಟ್ವೀಟ್‌ಗೆ 74,000 ಲೈಕ್‌ಗಳು ಹಾಗೂ 6,000ಕ್ಕೂ ಹೆಚ್ಚು ರಿಟ್ವೀಟ್‌ಗಳು ಸಂದಾಯವಾಗಿವೆ.
ಆ ವ್ಯಕ್ತಿಯ ಸಜ್ಜನಿಕೆಗೆ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡಿ ಟ್ವೀಟ್ ಮಾಡಿದ್ದಾರೆ.
https://twitter.com/sabrinaaloueche/status/1446861770468040711?ref_src=twsrc%5Etfw%7Ctwcamp%5Etweetembed%7Ctwterm%5E1446861770468040711%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fstrangers-heartwarming-gesture-after-woman-fell-asleep-on-train%2F823573