ತ್ರಿಶೂರ್: ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಮಾತಿದೆ. ಈ ಮಾತಿನಂತೆ ನಡೆದುಕೊಳ್ಳುವವರು ಅನೇಕರಿದ್ದಾರೆ. ಹಾಗೆಯೇ ಇಲ್ಲೊಬ್ಬಳು ಯುವತಿಯ ಉನ್ನತ ಶಿಕ್ಷಣಕ್ಕಾಗಿ ಅಪರಿಚಿತರು ಸಹಾಯ ಮಾಡಿದ್ದು, ಇದನ್ನು ಆಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ತಲಕೊಟ್ಟುಕರ ವಿದ್ಯಾ ಅಕಾಡೆಮಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಪಡೆದ ಪತ್ರವನ್ನು ಕೀರ್ತಿ ಜಯದೇವನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..? ಶುರುವಾಗಿದೆ ಹೀಗೊಂದು ಚರ್ಚೆ
ಪತ್ರವು ಕೀರ್ತಿ ಜಯದೇವನ್ ಅವರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಿದೆ. ವಿದ್ಯಾರ್ಥಿವೇತನ ನಿಧಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಕಾಲೇಜಿನ ಐದು ಸದಸ್ಯರ ಸಮಿತಿಯು ಅವರ ಮನೆಗಳಿಗೆ ಭೇಟಿ ನೀಡಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ನಿಮ್ಮ ಬಳಿ ಇದೆಯಾ ಈ ನಾಣ್ಯ…? ಹಾಗಿದ್ದಲ್ಲಿ ಗಳಿಸಬಹುದು ಲಕ್ಷಾಂತರ ರೂಪಾಯಿ
ತನ್ನ ತಂದೆ ತಾಯಿಗೆ ತಿಂಗಳಿಗೆ ಒಟ್ಟು 14,000 ರೂಪಾಯಿ ಸಂಬಳ ಬರುತ್ತದೆ. ನಾಲ್ಕು ಮಂದಿ ಸದಸ್ಯರಿರುವ ಕುಟುಂಬವನ್ನು ಇಷ್ಟೇ ಸಂಬಳದಲ್ಲಿ ನಿಭಾಯಿಸಬೇಕಾಗಿತ್ತು. ಹೀಗಾಗಿ ಕಾಲೇಜು ಮೆಟ್ಟಿಲು ಹತ್ತೋದಕ್ಕೆ ಆರ್ಥಿಕ ಸಮಸ್ಯೆ ಎದುರಾದಾಗ, ಅಪರಿಚಿತರ ದಯೆಯಿಂದ ವಿದ್ಯಾರ್ಥಿ ವೇತನದ ಮೂಲಕ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾ ಕೀರ್ತಿ ಟ್ವಿಟ್ಟರ್ ಮುಖಾಂತರ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕೀರ್ತಿ ಜಯದೇವನ್ ಅವರ ಟ್ವೀಟ್ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಭಾರಿ ವೈರಲ್ ಆಗಿದೆ. ಇದು 21,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಜಯದೇವನ್ ಅವರ ಟ್ವೀಟ್ ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.