
ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಅರ್ನೆಸ್ಟ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಫ್ಲೋರಿಡಾದ ಒರ್ಲ್ಯಾಂಡೊದಲ್ಲಿರುವ ಸೀ ವರ್ಲ್ಡ್ ಈ ಘಟನೆಗೆ ಸಾಕ್ಷಿಯಾಗಿದೆ. ಟ್ವಿಟ್ಟರ್‌ನಲ್ಲಿ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಮೈಮ್‌ನಂತೆ ವೇಷ ಧರಿಸಿರುವ ವ್ಯಕ್ತಿಯೊಬ್ಬರು ವಾಟರ್‌ಪಾರ್ಕ್‌ನಲ್ಲಿ ಮಗು ಹಿಡಿದುಕೊಂಡಿದ್ದ ಮಹಿಳೆಯನ್ನು ನಿಲ್ಲಿಸಿದ್ದಾರೆ. ಆಕೆ ಒಂದು ಕೈಯಲ್ಲಿ ಮಗು ಹಿಡಿದುಕೊಂಡಿದ್ದರೆ, ಇನ್ನೊಂದು ಭುಜದಲ್ಲಿ ಬ್ಯಾಗ್ ಹೊತ್ತೊಯ್ದಿದ್ದರು.
ಮಹಿಳೆಯ ಹಿಂದಿನಿಂದ ಬರುತ್ತಿದ್ದ ವ್ಯಕ್ತಿಯನ್ನು ಕಂಡ ಅವರು, ಆತ ನಿಮಗೆ ಪರಿಚಯದವರೇ ಎಂದು ಕೇಳಿದ್ದಾರೆ. ಮಹಿಳೆ ಹೌದು, ಆತ ತನ್ನ ಗಂಡ ಎಂದು ಹೇಳಿದ್ದಾಳೆ. ಕೂಡಲೇ ಮೈಮ್ ವೇಷಧಾರಿ ಮಹಿಳೆಯ ಭುಜದಲ್ಲಿದ್ದ ಬ್ಯಾಗ್ ತೆಗೆದು ಆತನಿಗೆ ಕೊಟ್ಟಿದ್ದಾರೆ. ತನ್ನ ಪತ್ನಿಗೆ ಸಹಾಯ ಮಾಡುವಂತೆ ಪರೋಕ್ಷವಾಗಿ ತಿಳಿಸಿದ್ದಾರೆ. ಇದನ್ನು ನೋಡಿದ ಅಲ್ಲೇ ಇದ್ದ ಪ್ರೇಕ್ಷಕರು ಮೈಮ್ ವೇಷಧಾರಿಯ ನಡೆಗೆ ಚಪ್ಪಾಳೆ ತಟ್ಟಿ, ಹರ್ಷೋದ್ಗಾರ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋವನ್ನು 1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಕೂಡ ಮೈಮ್ ವೇಷಧಾರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.