
ಈ ಘಟನೆ ನೋಯ್ಡಾದ ಕೊತ್ವಾಲಿ ಪೊಲೀಸ್ ಠಾಣೆ ಸೆಕ್ಟರ್ 49ರ ವ್ಯಾಪ್ತಿಯಲ್ಲಿ ನಡೆದಿದ್ದು, ಅನ್ವೇಷಾ ಡೇ ಎಂಬ ಈ ಯುವತಿ ಸಮೀಪದ ಪಾರ್ಕಿಗೆ ತೆರಳಿ ಮಳೆ ನೀರಿನಲ್ಲಿ ಸಂಭ್ರಮಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕ ಆಕೆಯ ಮೈ ಮೇಲೆ ಕೈ ಹಾಕಿದ್ದಲ್ಲದೆ ಪ್ರತಿರೋಧ ತೋರಿದಾಗ ಹಲ್ಲೆ ಕೂಡ ನಡೆಸಿದ್ದಾನೆ. ಅದೇ ಸಂದರ್ಭದಲ್ಲಿ ಇನ್ನಿಬ್ಬರು ಯುವತಿಯರು ಅಲ್ಲಿಗೆ ಬಂದಿದ್ದು, ಅವರನ್ನು ನೋಡಿ ಆರೋಪಿ ಪರಾರಿಯಾಗಿದ್ದಾನೆ.
ಅನ್ವೇಷಾ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರೂ ಅವರುಗಳು ನಿರ್ಲಕ್ಷ್ಯ ತೋರಿದರು ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಅನ್ವೇಷಾ, ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಈ ಹಿಂದೆಯೂ ಕೂಡ ಆಕೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಶ್ಲೀಲ ವಿಡಿಯೋಗಳನ್ನು ಹಾಕಿ ಲೈಕ್ಸ್ ಹಾಗೂ ಕಮೆಂಟ್ ಪಡೆದುಕೊಳ್ಳಲು ಯತ್ನಿಸಿದ್ದಳು. ಇದನ್ನು ಮೊದಲು ನಿಲ್ಲಿಸು ಎಂದು ನೆಟ್ಟಿಗರು ಹೇಳಿದ್ದಾರೆ.