![](https://kannadadunia.com/wp-content/uploads/2022/01/elderly-woman.png)
ಕರುಣೆಗೆ ಸಮನಾದ ಗುಣ ಮತ್ತೊಂದಿಲ್ಲ ಎಂದು ಪದೇ ಪದೇ ಸಾಬೀತು ಮಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಸಾಕಷ್ಟು ನೋಡಿದ್ದೇವೆ.
ಇಂಥ ಮತ್ತೊಂದು ನಿದರ್ಶನದಲ್ಲಿ, ವೃದ್ಧ ಮಹಿಳೆಯೊಬ್ಬರಿಂದ ಸ್ಟ್ರಾಬೆರ‍್ರಿಗಳನ್ನು ಖರೀದಿ ಮಾಡುತ್ತಿರುವ ವ್ಯಕ್ತಿಯೊಬ್ಬರು ಆ ವೇಳೆ ತೋರಿದ ಸುಂದರ ನಡೆಯೊಂದು ವಿಡಿಯೋದಲ್ಲಿ ರೆಕಾರ್ಡ್ ಆಗಿ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.
ಉರಿಯೂತಕ್ಕೆ ಸ್ಟ್ರಾಬೆರಿ ರಾಮಬಾಣ
ಸ್ಟ್ರಾಬೆರ‍್ರಿ ತುಂಬಿದ್ದ ಡಬ್ಬಿಗಳನ್ನು ಮಾರುತ್ತಿದ್ದ ಮಹಿಳೆಗೆ ಅವುಗಳ ಬೆಲೆ ಎಷ್ಟೆಂದು ಕೇಳಿದ ಈ ವ್ಯಕ್ತಿ, ತಾನು ಎಲ್ಲ ಡಬ್ಬಗಳನ್ನೂ ಖರೀದಿ ಮಾಡುವುದಾಗಿ ತಿಳಿಸಿದ್ದಾನೆ. ವೃದ್ಧೆ ಆ ಎಲ್ಲಾ ಡಬ್ಬಗಳನ್ನು ಆತನಿಗೆ ಕೊಡುತ್ತಲೇ ಹಣದ ಜೊತೆಗೆ ಹಣ್ಣು ಡಬ್ಬಿಯನ್ನು ಮರಳಿಸಿದ ಆತ, “ನಿಮಗೆ ಗೊತ್ತೇ ? ನೀವು ಸ್ಟ್ರಾಬೆರ‍್ರಿಗಳನ್ನು ಇಟ್ಟುಕೊಂಡು ನೀವು ಇನ್ನಷ್ಟು ಮಾರುತ್ತಿರಿ” ಎಂದಿದ್ದಾರೆ.
ಈ ವಿಡಿಯೋ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಂ ಬಳಕೆದಾರ ಒಸಿಟೋ ಲಿಮಾ ಶೇರ್ ಮಾಡಿದ್ದು, ’ಪ್ಯೂಬಿಟಿ’ ಹೆಸರಿನ ಪೇಜ್ ಒಂದರಲ್ಲಿ ಮತ್ತೆ ಶೇರ್ ಆಗಿ ಅಲ್ಲಿಂದ ಆಚೆಗೆ ಇನ್ನಷ್ಟು ವೈರಲ್ ಆಗಿದೆ.
“ಮಾನವೀಯತೆಯ ಮೇಲೆ ನಂಬಿಕೆ ಮತ್ತೊಮ್ಮೆ ದೃಢಪಟ್ಟಿದೆ,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋಗೆ ಅದಾಗಲೇ 39.2 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ.
https://youtu.be/SUy25mL-oVQ