ಮೆಟ್ರೋ ರೈಲನ್ನು ಹತ್ತುವಾಗ ತನ್ನ ಹೆತ್ತವರಿಂದ ಬೇರ್ಪಟ್ಟ ಬಾಲಕನೊಬ್ಬ ಸಂಪೂರ್ಣವಾಗಿ ಅಸಹಾಯಕನಾಗಿ ಅಳುತ್ತಿರುವ ಮತ್ತು ಸಹ ಪ್ರಯಾಣಿಕರೊಬ್ಬರು ಅವನಿಗೆ ಸಾಂತ್ವನ ಹೇಳುವ ವಿಡಿಯೋ ಒಂದು ವೈರಲ್ ಆಗಿದೆ.
ಫ್ರಾನ್ಸ್‌ನ ಮೆಟ್ರೋದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಅನ್ನು ಗುಡ್‌ನ್ಯೂಸ್ ಮೂವ್‌ಮೆಂಟ್ ಶೇರ್ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಮೆಟ್ರೊ ನಿಲ್ದಾಣದಲ್ಲಿ ತಂದೆ-ತಾಯಿಯಿಂದ ಬೇರ್ಪಟ್ಟ ಬಾಲಕ ಅಳುತ್ತಿರುವುದನ್ನು ನೋಡಬಹುದು. ಬಾಲಕ ಸಂಪೂರ್ಣವಾಗಿ ಅಸಮರ್ಥನಾಗಿದ್ದು ಹೆತ್ತವರನ್ನು ತಲುಪಲು ಪ್ರಯತ್ನಿಸುವುದನ್ನು ನೋಡಬಹುದು. ಆದರೆ ಏನೂ ಮಾಡಲಾಗದೇ ಅವನು ಕುಸಿದು ಬೀಳುತ್ತಾನೆ.
ಆ ಸಮಯದಲ್ಲಿ ಅವನ ಪಕ್ಕದಲ್ಲಿ ನಿಂತಿದ್ದ ಮಹಿಳೆ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾಳೆ. ಬಾಲಕನಿಗೆ ಸಾಂತ್ವನ ಹೇಳಿ ಶಾಂತಗೊಳಿಸಲು ಪ್ರಯತ್ನಿಸುತ್ತಾಳೆ. ಆದರೂ ಬಾಲಕ ಸುಮ್ಮನಾಗುವುದಿಲ್ಲ. ನಂತರ ಆತನ ಪಾಲಕರು ಬಳಿ ಬಂದಾಗ ಬಾಲಕ ಖುಷಿ ಪಡುವುದನ್ನು ಕಾಣಬಹುದು.
ಅದೇ ಇನ್ನೊಂದೆಡೆ ಬಾಲಕ ಅಳುತ್ತಿದ್ದರೂ ಪ್ರಯಾಣಿಕರು ಅದನ್ನು ನೋಡುತ್ತಾ ಸುಮ್ಮನೆ ಕುಳಿತಿರುವುದನ್ನೂ ಕಾಣಬಹುದು. ಈ ಭೂಮಿಯ ಮೇಲೆ ಎಲ್ಲಾ ರೀತಿಯ ಜನರೂ ಇರುತ್ತಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.