ಆಕಾಶದಲ್ಲಿನ ಪ್ರತಿ ಅಂಶಗಳು ಸಹ ಕುತೂಹಲ ಮೂಡಿಸುತ್ತವೆ. ಕೆಲವೊಮ್ಮೆ ಸ್ಪಷ್ಟವಾಗದ ನಿಗೂಢ ಅಂಶಗಳು ಕಂಡಾಗ ಖಗೋಳ ವಿಜ್ಞಾನಿಗಳು ಸೇರಿದಂತೆ ಸಾಮಾನ್ಯ ಜನರಲ್ಲೂ ಕುತೂಹಲ ತೀವ್ರವಾಗಿರುತ್ತದೆ.
ಹೀಗೆ ಚೆನ್ನೈನಲ್ಲಿ ನಿಗೂಢ ವಸ್ತುಗಳು ಆಗಸದಲ್ಲಿ ಕಂಡಿದ್ದು ಅದರ ವಿಡಿಯೋನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಚಿತ್ರವು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಏಲಿಯನ್ ಗಳಾ? ಉಪಗ್ರಹಗಳಾ ? ಅಥವಾ ಮುರಿದುಬಿದ್ದ ಡ್ರೋನ್ ಅಥವಾ ಜೆಟ್‌ಗಳ ಭಾಗಗಳಾಗಿವೆಯಾ ಎಂಬ ಪ್ರಶ್ನೆ ಎದ್ದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘Bien_forever’ ಎಂಬ ಪುಟದಿಂದ ಹಂಚಿಕೊಳ್ಳಲಾದ ವೀಡಿಯೊವು ಗುರುತಿಸಲಾಗದ ವಸ್ತು ಚೆನ್ನೈ ಮೇಲೆ ಆಕಾಶದಲ್ಲಿ ಹಾರುತ್ತಿರುವುದನ್ನು ತೋರಿಸುತ್ತದೆ.
“ಆಗಸ್ಟ್ 19 2024 ರಂದು, ನಿಗೂಢ ವಸ್ತುವೊಂದು ಭಾರತದ ಚೆನ್ನೈ ಮೇಲೆ ತೂಗಾಡುತ್ತಿರುವ ವೀಡಿಯೊದಲ್ಲಿ ಸೆರೆಹಿಡಿಯಲ್ಪಟ್ಟಿತು. ಇದು ಡ್ರೋನ್, ಗುರುತಿಸಲಾಗದ ಹಾರುವ ವಸ್ತು ಅಥವಾ ಇನ್ನೇನಾದರೂ ಇರಬಹುದಾ?” ಎಂದು ಪ್ರಶ್ನಿಸಲಾಗಿದೆ.
ಆಗಸ್ಟ್ 19 ರಂದು ಸಂಜೆ ಚೆನ್ನೈ ಮೇಲೆ ಆಕಾಶದಲ್ಲಿ ತೂಗಾಡುತ್ತಿರುವಂತೆ ದೃಶ್ಯ ಕಂಡಿದೆ. ಕ್ಯಾಮರಾವನ್ನು ಹಿಡಿದಿರುವ ವ್ಯಕ್ತಿಯು ನಂತರ ಝೂಮ್ ಇನ್ ಮಾಡಿದಾಗ ತಟ್ಟೆಯ ಆಕಾರದ ಹಾರುವ ವಸ್ತುವಿನ ಕೆಳಭಾಗದಲ್ಲಿ ಸಾಲುಗಳನ್ನು ಹೊಂದಿರುವ ದೀಪಗಳ ಸ್ಟ್ರಿಂಗ್ ಅನ್ನು ನೋಡಲು ಸಾಧ್ಯವಾಗುತ್ತದೆ. ಗುರುತಿಸಲಾಗದ ವಸ್ತುವು ಯಾವುದೇ ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ತೋರದಿದ್ದರೂ ಒಂದು ಬಿಂದುವಿನ ಮೇಲೆ ಸುಳಿದಾಡುತ್ತಲೇ ಇರುತ್ತದೆ.
ಕ್ಲಿಪ್ ಅನ್ನು ಆಗಸ್ಟ್ 20 ರಂದು ಹಂಚಿಕೊಂಡಿದ್ದು ಇದುವರೆಗೆ 4.4 ಮಿಲಿಯನ್ ವೀಕ್ಷಣೆ ಗಳಿಸಿದೆ. ಕೆಲವರು ಇದಕ್ಕೆ ವ್ಯಂಗ್ಯವಾಗಿ, ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.