alex Certify ಭಾರತದಲ್ಲಿ ರೂಢಿಯಲ್ಲಿದೆ ಮೈ ಜುಮ್ಮೆನಿಸುವ ಪದ್ಧತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ರೂಢಿಯಲ್ಲಿದೆ ಮೈ ಜುಮ್ಮೆನಿಸುವ ಪದ್ಧತಿ….!

ವಿಶ್ವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅನೇಕ ಪದ್ಧತಿ, ಮೂಢನಂಬಿಕೆಗಳು ಇನ್ನೂ ಜನರನ್ನು ಬಿಟ್ಟು ಹೋಗಿಲ್ಲ. ಭಾರತದಲ್ಲಿ ಈಗ್ಲೂ ನಂಬಲು ಅಸಾಧ್ಯವಾದ ಘಟನೆಗಳು ನಡೆಯುತ್ತಿರುತ್ತವೆ. 21 ನೇ ಶತಮಾನದಲ್ಲಿದ್ರೂ ಮೂಢನಂಬಿಕೆ ಜನರಿಂದ ತೊಲಗಿಲ್ಲ.

ತಮಿಳುನಾಡಿನಲ್ಲಿ ಆಚರಿಸಲಾಗುವ ಹಬ್ಬವೊಂದು ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತೆ. ಥೈಪುಸಂ ಎಂಬ ಹೆಸರಿನ ಹಬ್ಬದಲ್ಲಿ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆಗಳನ್ನು ಹಾಕಿಕೊಂಡು ಭಾರವಾದ ವಸ್ತುಗಳನ್ನು ಎಳೆಯುತ್ತಾರೆ. ಇನ್ನೂ ಕೆಲವು ಜನರು ತಮ್ಮ ದೇಹದಲ್ಲಿ ಸೂಜಿಗಳನ್ನು ಚುಚ್ಚಿಕೊಳ್ಳುತ್ತಾರೆ. 48 ದಿನಗಳವರೆಗೆ ನಡೆಯುವ ಈ ಹಬ್ಬವನ್ನು ನೋಡಲು ನೂರಾರು ಜನ ಸೇರಿರುತ್ತಾರೆ.

ಇನ್ನೂ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಕ್ಕಳನ್ನು ಎತ್ತರದಿಂದ ಎಸೆಯುವ ವಿಚಿತ್ರ ಪದ್ಧತಿಯಿದೆ. ಬಾಬಾ ಉಮರ್ ಅವರ ದರ್ಗಾದಲ್ಲಿ ಈ ಆಚರಣೆ ಮಾಡಲಾಗುತ್ತದೆ. ಮಗುವಿಗಾಗಿ ಹರಕೆ ಹೊರುವ ಪಾಲಕರು, ಮಗುವಾದ್ಮೇಲೆ ಇಲ್ಲಿಗೆ ಬಂದು ಮಗುವನ್ನು ಮೇಲಿನಿಂದ ಎಸೆಯುತ್ತಾರೆ.

ಹಿಂದೂ ಧರ್ಮದಲ್ಲಿ ಹೆಚ್ಚಿನ ಜನರು ಜಾತಕ ನೋಡಿ ಮದುವೆಯಾಗ್ತಾರೆ. ಒಂದು ವೇಳೆ ಜಾತಕದಲ್ಲಿ ಮಂಗಳ ದೋಷವಿದ್ದರೆ, ಜನರು ದೋಷವನ್ನು ಹೋಗಲಾಡಿಸಲು ನಾಯಿ ಅಥವಾ ಇನ್ನಾವುದೇ ಪ್ರಾಣಿಯನ್ನು ಮದುವೆಯಾಗಬೇಕು. ಹಲವೆಡೆ ಮರವನ್ನು ಮದುವೆಯಾಗುವ ಪದ್ಧತಿಯೂ ಇದೆ.

ಇನ್ನೂ ರಾಜಸ್ಥಾನದ ಜೋಧಪುರದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಇದರಲ್ಲಿ ಮಹಿಳೆಯರು ದೇವರ ರೂಪವನ್ನು ಪಡೆಯುತ್ತಾರೆ. ಈ ಹಬ್ಬದ ಹೆಸರು ಧಿಂಗ ಗವರ್. ಈ ಸಂದರ್ಭದಲ್ಲಿ ಮೇಳವನ್ನು ಸಹ ಆಯೋಜಿಸಲಾಗುತ್ತದೆ. ಈ ಜಾತ್ರೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...