ಬೆಂಗಳೂರು: ಆಟವಾಡುವಾಗ ಆಯತಪ್ಪಿ ಎಸ್‌ಟಿಪಿ ಟ್ಯಾಂಕಿಗೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ದೊಡ್ಡತೋಗೂರಿನ ಸೆಲೆಬ್ರಿಟಿ ಪ್ಯಾರಡೈಸ್ ಲೇಔಟ್ ನಲ್ಲಿ ನಡೆದಿದೆ.
ಡಾರ್ಜಿಲಿಂಗ್ ಮೂಲದ ಎಲಿನಾ ಲೆಪ್ಚಿ(10) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ಎಸ್‌ಟಿಪಿ ಟ್ಯಾಂಕಿಗೆ ಯಾವುದೇ ಪೆನ್ಸಿಂಗ್ ಹಾಕಿರಲಿಲ್ಲ. ಆಟವಾಡುತ್ತಾ ಎಸ್‌ಟಿಪಿ ಟ್ಯಾಂಕ್ ಬಳಿಗೆ ಹೋದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ. ಅಪಾರ್ಟ್ ಮೆಂಟಿನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.
ಬಾಲಕಿ ಮೃತದೇಹ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.