ಮಶ್ರೂಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ತರತರಹದ ರೆಸಿಪಿಗಳನ್ನು ಇದನ್ನು ಬಳಸಿ ಮಾಡಬಹುದು. ಕೆಲವೊಮ್ಮೆ ತಾಜಾ ಅಣಬೆಗಳು ಸಿಕ್ಕಾಗ ಅದನ್ನು ಫ್ರಿಜ್ ಮಾಡಿ ಇಡುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ ನೋಡಿ.
*ಮೊದಲಿಗೆ ಮಶ್ರೂಮ್ ಅನ್ನು ಚೆನ್ನಾಗಿ ಕೈಯಿಂದ ತೊಳೆಯಿರಿ. ಇದನ್ನು ಹದ ಗಾತ್ರದ ತುಂಡುಗಳನ್ನಾಗಿ ಮಾಡಿ ಒಂದು ಕುಕ್ಕಿಸ್ ಶೀಟ್ ಮೇಲೆ ಹರಡಿ ಸ್ವಲ್ಪ ಕಾಲಗಳ ಹೊತ್ತು ಫ್ರಿಜ್ ಮಾಡಿ. ನಂತರ ಇದನ್ನು ಒಂದು ಸ್ಟೋರೇಜ್ ಬ್ಯಾಗ್ ಗೆ ಹಾಕಿ ಫ್ರಿಜ್ ಮಾಡಿ. ಬೇಕಾದಾಗ ಉಪಯೋಗಿಸಿ.
* ಮಶ್ರೂಮ್ ಅನ್ನು ಎರಡು ಭಾಗವಾಗಿ ಕತ್ತರಿಸಿಕೊಂಡು ಬಿಸಿ ನೀರಿನ ಆವಿಯಲ್ಲಿ 3ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ, ನಂತರ ಒಂದು ಬೋಗುಣಿಗೆ ಐಸ್ ಕ್ಯೂಬ್ ಅನ್ನು ಹಾಕಿ ಅದರ ಮೇಲೆ ಜಾಲರಿ ಇಡಿ ಅದಕ್ಕೆ ಈ ಬೇಯಿಸಿದ ಮಶ್ರೂಮ್ ಹಾಕಿ 5 ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ಇದನ್ನು ಒಂದು ಜಿಪ್ ಲಾಕ್ ಕವರ್ ಗೆ ಹಾಕಿ ಫ್ರಿಜ್ ಮಾಡಿರಿ.
* ಇನ್ನು ಒಂದು ಪ್ಯಾನ್ 1 ಟೇಬಲ್ ಸ್ಪೂನ್ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಮಶ್ರೂಮ್ ಹಾಕಿ ಬೇಯುವವರೆಗೆ ಫ್ರೈ ಮಾಡಿ. ನಂತರ ಇದನ್ನು ತಣ್ಣಗಾಗಲು ಬಿಟ್ಟು ಕವರ್ ಗೆ ಹಾಕಿ ಫ್ರಿಜ್ ಮಾಡಿ.