ನವದೆಹಲಿ : ಏಕಾಂತದಲ್ಲಿ ಕುಳಿತಿದ್ದ ಜೋಡಿಗೆ ಗಸ್ತು ತೀರುಗುತ್ತಿದ್ದ ಪೊಲೀಸರೊಬ್ಬರು ಮಾಸ್ಕ್ ಹಾಕಿಕೊಳ್ಳುವಂತೆ ಬುದ್ಧಿ ಹೇಳಿದ್ದಕ್ಕೆ ಯುವತಿ ಪೊಲೀಸರ ಕೆನ್ನಗೆ ಬಾರಿಸಿದರೆ, ವ್ಯಕ್ತಿ ಗುಂಡು ಹಾರಿಸಿದ್ದಾನೆ.
ಈ ಘಟನೆ ರಾಷ್ಟ್ರರಾಜಧಾನಿ ಶಹದಾರ ಜಿಲ್ಲೆಯ ಸೀಮಾಪುರಿಯಲ್ಲಿ ನಡೆದಿದ್ದು, ಅಲ್ಲಿನ ಪಾರ್ಕ್ ವೊಂದರಲ್ಲಿ ಜೋಡಿಯೊಂದು ಕುಳಿತಿದೆ. ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಪೊಲೀಸರೊಬ್ಬರು ಈ ಜೋಡಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡ ಜೋಡಿ ವಿಕೃತಿ ಮೆರೆದಿದ್ದು, ಯುವತಿಯು ಪೊಲೀಸಪ್ಪನ ಕೆನ್ನೆಗೆ ಬಾರಿಸಿದರೆ, ಅಲ್ಲಿದ್ದ ವ್ಯಕ್ತಿ ಗಂಡು ಹಾರಿಸಿದ್ದಾನೆ. ಆದರೆ, ಗಂಡು ಪೊಲೀಸ್ ಗೆ ತಲುಪದೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಗುಂಡು ಹಾರಿಸಿದ ಆರೋಪಿಯು ನ್ಯಾಯವಾದಿ. ಅಲ್ಲದೇ, ಬಾಲಾಪರಾಧಿ ನ್ಯಾಯ ಮಂಡಳಿಯ ಕಲ್ಯಾಣಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಪೂರ್ವ ದೆಹಲಿಯ ಪಟ್ಟರ್ ಗಂಜ್ ನ ನಿವಾಸಿಗಳು ಎನ್ನಲಾಗಿದೆ.