ಕೀವ್: ರಷ್ಯಾ ಐದನೇ ದಿನವೂ ಉಕ್ರೇನ್ ಮೇಲೆ ತನ್ನ ಯುದ್ಧ ಮುಂದುವರೆಸಿದೆ. ಉಕ್ರೇನ್ ಈಗಾಗಲೇ ರಷ್ಯಾ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿಯೂ ತಿಳಿಸಿದೆ. ಆದಾಗ್ಯೂ ರಷ್ಯಾ ಪಡೆಗಳು ಉಕ್ರೇನ್ ನ ಮಧ್ಯಭಾಗದ ಝೈಟೋಮಿರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ. ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯರ ಮೇಲೂ ಉಕ್ರೇನ್ ಸೇನೆಯಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ರಷ್ಯಾದ ರಣಭೀಕರ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿದ್ದು, ಉಕ್ರೇನಲ್ಲಿರುವ ಭಾರತೀಯರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಕೇಂದ್ರ ಸರ್ಕಾರ ಭಾರತೀಯರ ಏರ್ ಲಿಫ್ಟ್ ಗೆ ಹರಸಾಹಸ ಪಡುತ್ತಿದೆ. ಸಾವಿರಾರು ಭಾರತೀಯರು ಪೊಲ್ಯಾಂಡ್ ಹಾಗೂ ರೊಮೇನಿಯಾ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬಿಲಿಯನೇರ್ ಗಳಿಗೆ ಬಿಗ್ ಶಾಕ್: ಪುಟಿನ್ ಯುದ್ಧಕ್ಕೆ ಬೆಲೆ ತೆತ್ತ ರಷ್ಯಾದ ಶ್ರೀಮಂತರು; 126 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ನಷ್ಟ
ಉಕ್ರೇನ್ ತೊರೆಯಲು ಭಾರತೀಯರು ನಿರ್ಧರಿಸಿರುವುದರಿಂದ ಗಡಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉಕ್ರೇನ್ ನಿಂದ ಪೋಲ್ಯಾಂಡ್ ಗೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ತಡೆಯಲಾಗುತ್ತಿದೆ. ಇದೇ ವೇಳೆ ಉಕ್ರೇನ್ ಸೈನಿಕರು ಕೆಲ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ ದಾಳಿ, ಭೀಕರ ಚಳಿ, ಆಹಾರ, ನೀರಿಗಾಗಿಯೂ ಪರದಾಡುತ್ತಿರುವ ಭಾರತೀಯರು ಪೋಲ್ಯಾಂಡ್ ಹಾಗೂ ರೊಮೇನಿಯಾ ಗಡಿ ಮಧ್ಯೆ ನರಕಯಾತನೆ ಅನುಭವಿಸುವಂತಾಗಿದೆ ಎನ್ನಲಾಗಿದೆ.