ಈಗಿನ ಜೀವನ ಕ್ರಮದಲ್ಲಿ ಬಹುತೇಕ ಪುರುಷರು ಹಾಗೂ ಮಹಿಳೆಯರು ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಡಯಾಬಿಟೀಸ್ ಹೀಗೆ ಒಂದೊಂದೆ ಸಮಸ್ಯೆಗಳು ಶುರುವಾಗುತ್ತಾ ಹೋಗುತ್ತೆ. ಹೀಗಾಗಿ ನಿಮ್ಮ ನಿತ್ಯ ಜೀವನ ಕ್ರಮದಲ್ಲಿ ಈ ಐದು ಯೋಗಾಸನದ ಭಂಗಿಗಳನ್ನ ರೂಢಿ ಮಾಡಿಕೊಂಡ್ರೆ ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಪರಿಹಾರ ಕಂಡು ಕೊಳ್ಳಬಹುದಾಗಿದೆ.
ಭುಜಂಗಾಸನ : ಹೆಡೆ ಎತ್ತಿದ ಸರ್ಪದ ರೀತಿಯಲ್ಲಿ ಮಾಡುವ ಆಸನವೇ ಭುಜಂಗಾಸನ. ಇದರಲ್ಲಿ ನಿಮ್ಮ ಕಾಲನ್ನ ಸಂಪೂರ್ಣವಾಗಿ ನೆಲಕ್ಕೆ ತಾಗಿಸಿ ಹೊಟ್ಟೆಯಿಂದ ಸಂಪೂರ್ಣ ದೇಹದ ಮೇಲ್ಬಾಗವನ್ನ ಹೆಡೆ ಎತ್ತಿದ ಸರ್ಪದಂತೆ ಮಾಡಿಕೊಳ್ಳಬೇಕು. ಈ ಭಂಗಿಯಲ್ಲಿ 25 ರಿಂದ 30 ಸೆಕೆಂಡ್ಗಳವರೆಗೆ ಇರಿ.. 10 ಬಾರಿ ಈ ಆಸನವನ್ನ ಮಾಡೋದ್ರಿಂದ ಹೊಟ್ಟೆ ಬೊಜ್ಜು ಕ್ರಮೇಣ ಕರಗಲಿದೆ.
ಧನುರಾಸನ : ಧನು ಅಂದರೆ ಬಿಲ್ಲು. ಬಿಲ್ಲಿನ ಆಕಾರದಲ್ಲಿ ದೇಹವನ್ನ ಮಾಡಿಕೊಳ್ಳೋದೇ ಧನುರಾಸನ. ಇದರಲ್ಲಿ ಯೋಗ ಮಾಡುವವರು ಮೊದಲು ನೆಲದ ಮೇಲೆ ಬೋರಲಾಗಿ ಮಲಗಬೇಕು. ಬಳಿಕ ತನ್ನ ಎರಡೂ ಕೈ ಗಳಿಂದ ಎರಡೂ ಕಾಲುಗಳನ್ನ ಹಿಮ್ಮುಖವಾಗಿ ಹಿಡಿಯಬೇಕು. ಈ ಆಸನ ಮಾಡೋದ್ರಿಂದ ಹೊಟ್ಟೆಯ ಕೊಬ್ಬು ಬಹಳ ಬೇಗ ಕರಗುತ್ತೆ. ಕನಿಷ್ಟ 60 ಸೆಕೆಂಡ್ಗಳವರೆಗಾದರೂ ಈ ಭಂಗಿಯಲ್ಲಿರೋಕೆ ಯತ್ನಿಸಿ.
ಕುಂಭಾಸನ : ಹೊಟ್ಟೆ ಬೊಜ್ಜನ್ನ ಕರಗಿಸೋಕೆ ಇದು ಬಹಳ ಸೂಕ್ತವಾದ ಆಸನವಾಗಿದ್ದರೂ ಸಹ ಇದನ್ನ ಮಾಡೋದು ಸ್ವಲ್ಪ ಕಷ್ಟದ ಕೆಲಸ. ಆದರೆ ಈ ಭಂಗಿಯಲ್ಲಿ ನೀವು ಹೆಚ್ಚು ಹೊತ್ತು ಇದ್ದಷ್ಟೂ ನಿಮ್ಮ ಹೊಟ್ಟೆಯ ಕೊಬ್ಬು ಕರಗೋದ್ರ ಜೊತೆ ಜೊತೆಗೆ ದೇಹದ ಇತರೆ ಭಾಗಗಳ ಕೊಬ್ಬು ಕೂಡ ಕರಗುತ್ತೆ.
ನೌಕಾಸನ : ದೋಣಿಯ ರೀತಿಯಲ್ಲಿ ದೇಹವನ್ನ ಇಟ್ಟುಕೊಳ್ಳೋದೇ ನೌಕಾಸನ. ಇದು ನಿಮ್ಮ ದೇಹದ ಮೂಳೆಗಳಿಗೆ ಶಕ್ತಿಯನ್ನ ಒದಗಿಸುತ್ತೆ. ಅಲ್ಲದೇ ಹೊಟ್ಟೆ ಕೊಬ್ಬು ಕರಗಿಸೋಕಂತು ತುಂಬಾನೇ ಉಪಕಾರಿ.
ಉಷ್ಟ್ರಾಸನ : ಒಂಟೆಗಳಂತೆ ಲಂಬವಾಗಿ ನಿಂತು ಮಾಡುವ ಆಸನವೇ ಉಷ್ಟ್ರಾಸನ. ಇದು ಕೂಡ ಕೊಂಚ ಕಷ್ಟಕರವಾದ ಭಂಗಿ. ಹಾಗಂತ ಕೊಬ್ಬನ್ನ ಕರಗಿಸೋಕೆ ತುಂಬಾನೇ ಸಹಕಾರಿ. ಇದರ ಜೊತೆಯಲ್ಲಿ ಭುಜ ಹಾಗೂ ಬೆನ್ನು ಮೊಳೆಗೂ ಶಕ್ತಿಯನ್ನ ತುಂಬುತ್ತೆ.