‘ಸ್ಟಾಪ್ ವಾರ್’ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್‌ನಲ್ಲಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಚಿತ್ರಣ ರಚಿಸಿದ್ದು, ಗಮನಸೆಳೆಯುವಂತಿದೆ.
ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ‘ಸ್ಟಾಪ್ ವಾರ್’ ಚಿತ್ರಣವನ್ನು ರಚಿಸಿದ್ದಾರೆ.
ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ ಅರ್ಥಪೂರ್ಣ ಕಲಾಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಮ್ಮ ಧ್ವಜಗಳ ಹಿನ್ನೆಲೆಯಲ್ಲಿ ತೋರಿಸಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಡುವೆ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಸೃಷ್ಟಿ ಸುಳಿವು ನೀಡಿದೆ.
ಇಬ್ಬರು ನಾಯಕರಿಗೆ ಸೌಹಾರ್ದಯುತವಾಗಿ ಹಸ್ತಲಾಘವ ಮಾಡಬೇಕೆಂದು ಹಸ್ತ ಚಾಚುವ ಮೂಲಕ ಎರಡು ಪ್ರದೇಶಗಳ ನಡುವೆ ಶಾಂತಿಯ ಸಂದೇಶವನ್ನು ಹರಡಲು ಪ್ರಯತ್ನಿಸುತ್ತಿರುವ ಯುವಕನನ್ನು ಕಲಾಕೃತಿಯಲ್ಲಿ ನಾವು ಕಾಣಬಹುದಾಗಿದೆ.