alex Certify ಈ 5 ಕೆಲಸಗಳನ್ನು ತಕ್ಷಣ ನಿಲ್ಲಿಸಿ; ಇಲ್ಲದಿದ್ದರೆ ಕೂದಲು ಉದುರಿ ತಲೆ ಬೋಳಾಗಬಹುದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ಕೆಲಸಗಳನ್ನು ತಕ್ಷಣ ನಿಲ್ಲಿಸಿ; ಇಲ್ಲದಿದ್ದರೆ ಕೂದಲು ಉದುರಿ ತಲೆ ಬೋಳಾಗಬಹುದು…!

ಬೋಳು ತಲೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಯಸ್ಸಾದಂತೆ ಕೂದಲು ಉದುರುವುದು ಸಾಮಾನ್ಯ, ಆದರೆ ಯುವಜನತೆ ಕೂಡ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ವೈದ್ಯಕೀಯ ಪರಿಸ್ಥಿತಿಗಳ ಜೊತೆಗೆ ಪ್ರತಿದಿನ ತಿಳಿಯದೆ ಮಾಡುವ ತಪ್ಪುಗಳು ಕೂಡ ಕೂದಲು ಉದುರಲು ಕಾರಣವಾಗುತ್ತವೆ.

ತಪ್ಪಾದ ಶಾಂಪೂ ಮತ್ತು ಕಂಡಿಷನರ್ ಬಳಕೆ

ಪ್ರತಿಯೊಬ್ಬರ ಕೂದಲಿನ ರಚನೆ ಮತ್ತು ಅಗತ್ಯಗಳು ವಿಭಿನ್ನಗಿರುತ್ತವೆ. ಸರಿಯಾದ ಶಾಂಪೂ ಬಳಸದೇ ಇದ್ದಲ್ಲಿ ಕೂದಲು ನಿರ್ಜೀವವಾಗುತ್ತದೆ. ಎಣ್ಣೆಯುಕ್ತ ಕೂದಲಿಗೆ, ಒಣ ಕೂದಲಿಗೆ ಸೂಕ್ತವಾದ ಶಾಂಪೂ ಮತ್ತು  ಕಂಡೀಶನರ್ ಬಳಸಬಾರದು. ಇದರಿಂದ ನೆತ್ತಿಯ ಮೇಲೆ ಸಂಗ್ರಹವಾಗಿರುವ ಕೊಳೆ ಹೋಗುವುದಿಲ್ಲ. ಆದ್ದರಿಂದ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಶಾಂಪೂ ಮತ್ತು ಕಂಡಿಷನರ್ ಅನ್ನು ಆಯ್ಕೆ ಮಾಡುವುದು ಮುಖ್ಯ.

ಸ್ಟೈಲಿಂಗ್ ಉತ್ಪನ್ನಗಳ ಅತಿಯಾದ ಬಳಕೆ

ಹೇರ್ ಜೆಲ್, ಸ್ಪ್ರೇ ಮತ್ತು ಸ್ಟ್ರೇಟ್‌ನರ್‌ನಂತಹ ಸ್ಟೈಲಿಂಗ್ ಉತ್ಪನ್ನಗಳು ಕೂದಲನ್ನು ಸುಂದರವಾಗಿಸುತ್ತವೆ. ಆದರೆ ಅವುಗಳ ಅತಿಯಾದ ಬಳಕೆಯು ಕೂದಲನ್ನು ದುರ್ಬಲಗೊಳಿಸುತ್ತದೆ. ಈ ಉತ್ಪನ್ನಗಳು ಕೂದಲನ್ನು ಶುಷ್ಕ ಮತ್ತು ನಿರ್ಜೀವಗೊಳಿಸುತ್ತದೆ, ಪರಿಣಾಮ ಸ್ಪ್ಲಿಟ್‌ ಹೇರ್‌ ಸಮಸ್ಯೆ ಬರಬಹುದು.

ಒದ್ದೆ ಕೂದಲು ಬಾಚಿಕೊಳ್ಳುವುದು

ಒದ್ದೆಯಾದ ಕೂದಲು ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಅದನ್ನು ಬಾಚಬಾರದು. ಒದ್ದೆ ಕೂದಲು ಬಾಚಿದರೆ ಸ್ಪ್ಲಿಟ್‌ ಹೇರ್‌ ಆಗಬಹುದು. ಕೂದಲು ಒಡೆಯುವುದನ್ನು ತಡೆಯಲು ಸ್ನಾನದ ನಂತರ ಅದನ್ನು ಟವೆಲ್‌ನಿಂದ ಲಘುವಾಗಿ ಒಣಗಿಸಬೇಕು. ನಂತರ ಅಗಲವಾದ ಹಲ್ಲಿನ ಬಾಚಣಿಗೆಯಿಂದ ನಿಧಾನವಾಗಿ ಬಾಚಿಕೊಳ್ಳಿ.

ಪ್ರತಿದಿನ ಶಾಂಪೂ ಬಳಕೆ

ಪ್ರತಿನಿತ್ಯ ಕೂದಲನ್ನು ಶಾಂಪೂವಿನಿಂದ ತೊಳೆಯಬಾರದು. ಹೀಗೆ ಮಾಡುವುದರಿಂದ ಕೂದಲು ದುರ್ಬಲವಾಗುತ್ತದೆ. 2-3 ದಿನಗಳಿಗೊಮ್ಮೆ ತಲೆಸ್ನಾನ ಮಾಡಿ. ಕೂದಲನ್ನು ತೊಳೆಯುವ ಮೊದಲು ಎಣ್ಣೆಯನ್ನು ಅನ್ವಯಿಸಿ. ಇದರಿಂದ ಕೂದಲು ಉದುರುವುದಿಲ್ಲ.

ಹೀಟ್‌ ಉಪಕರಣಗಳ ಬಳಕೆ

ಕೂದಲಿಗೆ ಹೆಚ್ಚು ಶಾಖ ಉಂಟುಮಾಡುವ ಸಾಧನಗಳನ್ನು ಬಳಸಬಾರದು. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಅದರಲ್ಲೂ ಕೂದಲನ್ನು ಕರ್ಲಿಂಗ್ ಮಾಡುವುದರಿಂದ ಅಥವಾ ಸ್ಟ್ರೈಟ್ ಮಾಡುವುದರಿಂದ ಕೂದಲು ತುಂಬಾ ದುರ್ಬಲವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...