ಪಾಟ್ನಾದಿಂದ ಟಾಟಾನಗರಕ್ಕೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಜಾರ್ಖಂಡ್‌ನಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಕೊಡರ್ಮಾದಿಂದ ಸರಿಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಸರ್ಮಾತಾರ್ ಮತ್ತು ಯದುದಿಹ್ ನಿಲ್ದಾಣಗಳ ನಡುವೆ ಘಟನೆ ಸಂಭವಿಸಿದೆ.
ದಾಳಿಯ ಪರಿಣಾಮವಾಗಿ ಕೋಚ್ C-2, ಸೀಟುಗಳು 43-45, ಮತ್ತು ಕೋಚ್ C-5, 63-64 ಸೀಟುಗಳ ಕಿಟಕಿಗಳು ಒಡೆದಿವೆ. ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ,
ಈ ಘಟನೆ ಆತಂಕ ಮೂಡಿಸಿದ್ದು, ಕಿಡಿಗೇಡಿಗಳ ಪತ್ತೆಗೆ ರಕ್ಷಣಾ ಸಿಬ್ಬಂದಿ ಕ್ರಮಕೈಗೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಮುಂಜಾನೆ ಉತ್ತರ ಪ್ರದೇಶದಲ್ಲಿ ಕೆಲವು ಕಿಡಿಗೇಡಿಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಬುಧವಾರ ರಾತ್ರಿ ವಾರಣಾಸಿ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾನ್ಪುರ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಉನ್ನತ-ಕಾರ್ಯನಿರ್ವಹಣೆಯ ಎಲೆಕ್ಟ್ರಿಕ್ ಮಲ್ಟಿಪಲ್-ಯುನಿಟ್ ರೈಲು ಆಗಿದ್ದು, ಇದನ್ನು ಭಾರತೀಯ ರೈಲ್ವೇಗಳು ನಿರ್ವಹಿಸುತ್ತವೆ. ಇದನ್ನು RDSO ವಿನ್ಯಾಸಗೊಳಿಸಿದೆ ಮತ್ತು ಚೆನ್ನೈನಲ್ಲಿರುವ ಸರ್ಕಾರಿ ಸ್ವಾಮ್ಯದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ICF) ನಿಂದ ತಯಾರಿಸಲ್ಪಟ್ಟಿದೆ. ಇದನ್ನು ಅರೆ-ಹೈ-ವೇಗದ ರೈಲು ಎಂದು ಪರಿಗಣಿಸಲಾಗಿದೆ, ಇದು ಭಾರತದಲ್ಲಿ ಎರಡನೇ ಅತಿ ವೇಗದ ರೈಲು ಆಗಿದೆ.