ಕಾರು ಕದ್ದ ಕಳ್ಳ ಮಾಲು ಸಮೇತ ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ ? 26-08-2022 9:37AM IST / No Comments / Posted In: Latest News, Live News, International ಸ್ಪೇನ್ನಲ್ಲಿ ಕಳ್ಳನೊಬ್ಬ ತನ್ನ ಕದ್ದ ವಾಹನದೊಂದಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ. ಮಂಗಳವಾರ ಸ್ಪ್ಯಾನಿಷ್ ರಾಜಧಾನಿ ಮ್ಯಾಡ್ರಿಡ್ನಿಂದ ಈ ಘಟನೆ ವರದಿಯಾಗಿದ್ದು, ಕಳ್ಳನನ್ನು ರಕ್ಷಿಸಲು ಮತ್ತು ಬಂಧಿಸಲು ತುರ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ದೊಡ್ಡ ಸುದ್ದಿಯಾಗಿದೆ. ಮೆಟ್ರೋ ನಿಲ್ದಾಣದ ಮೆಟ್ಟಿಲುಗಳ ಮೇಲೆ ಆತ ಕದ್ದ ಕಾರು ಸಿಲುಕಿತ್ತು. 36 ವರ್ಷದ ಕಳ್ಳನು ಪಾರ್ಕಿಂಗ್ ಸ್ಥಳದಿಂದ ಕಾರನ್ನು ಕದ್ದು ತಪ್ಪಿಸಿಕೊಳ್ಳಲು ಮುಖ್ಯದ್ವಾರ ಬಳಸಿದ್ದಾನೆ. ಗಾಜಿನ ಬಾಗಿಲನ್ನು ಒಡೆದು ನಿಲ್ದಾಣದ ಪ್ರವೇಶದ್ವಾರದ ಮೂಲಕ ತಪ್ಪಿಸಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಆದರೆ ಆತನ ಅದೃಷ್ಟ ಕೈಕೊಟ್ಟಿತು. ಸೆಡಾನ್ ಅನ್ನು ಮೆಟ್ರೋ ಸ್ಟೇಷನ್ ಮೆಟ್ಟಿಲುಗಳ ಮೇಲೆ ಓಡಿಸಿ ಪಲಾಯನ ಮಾಡಲು ಪ್ರಯತ್ನಿಸಿದಾಗ ಮೆಟ್ಟಿಲುಗಳ ಅರ್ಧದಾರಿಯ ಮೇಲೆ ಸಿಲುಕಿಕೊಂಡಿತು. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಓಡಿಹೋಗಲು ಪ್ರಯತ್ನಿಸಿದ. ಆದರೆ ಮಜ್ದಾ ರೇಲಿಂಗ್ ನಡುವೆ ಸಿಲುಕಿಕೊಂಡಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ, ಬಾಗಿಲು ತೆರೆಯಲು ಸಹ ಸಾಧ್ಯವಾಗಲಿಲ್ಲ. ಮ್ಯಾಡ್ರಿಡ್ನ ತುರ್ತು ಮಾಹಿತಿ ಕಚೇರಿಯು ಕದ್ದ ಕಾರಿನ ವೀಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಆ ವ್ಯಕ್ತಿ ಕೊಕೇನ್ ಸೇವಿಸಿದ್ದರ ಬಗ್ಗೆ ಪರೀಕ್ಷೆಗೊಳಪಟ್ಟಿದ್ದಾನೆ. ಬಂಧಿಸುವ ಮೊದಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಧ್ಯರಾತ್ರಿಯ ಸುಮಾರಿಗೆ ಘಟನೆ ಸಂಭವಿಸಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. Un conductor ha irrumpido en el interior del intercambiador de Plaza Elíptica con un coche robado y ha quedado encajado en las escaleras sin causar heridos. ➡️@SAMUR_PC ha atendido al conductor, ileso.➡️@BomberosMad retira el vehículo. ➡️@policiademadrid realiza el atestado. pic.twitter.com/RBRwnxzgCe — Emergencias Madrid (@EmergenciasMad) August 23, 2022