ತನ್ನ ದಿವಂಗತ ತಂದೆ ಸ್ಟೀವ್ ಇರ್ವಿನ್‌ರಂತೆಯೇ ರಾಬರ್ಟ್ ಕ್ಲಾರೆನ್ಸ್ ಇರ್ವಿನ್ ವನ್ಯಜೀವ ಸಾಹಸದ ಅನೇಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ.
2006ರಲ್ಲಿ ಸ್ಟಿಂಗ್ ರೇ ಒಂದರಿಂದ ಚುಚ್ಚಿಸಿಕೊಂಡು ನಿಧನರಾದ ಸ್ಟೀವ್ ಇರ್ವಿನ್ ಅವರು ಕಾಡು ಪ್ರಾಣಿಗಳನ್ನು, ವಿಶೇಷವಾಗಿ ಮೊಸಳೆಗಳನ್ನು ನಿರ್ವಹಿಸುವ ತಮ್ಮ ವಿಧಾನಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದರು. ಈ ಕಾರಣಕ್ಕಾಗಿ, ಅವರು ‘ದಿ ಕ್ರೊಕೊಡೈಲ್ ಹಂಟರ್’ ಎಂಬ ಹೆಸರನ್ನು ಪಡೆದಿದ್ದರು.
ಸ್ಟೀವ್ ಮರಣದ ಬಳಿಕ, ಅವರ ಕುಟುಂಬವು ಆತ ಹುಟ್ಟುಹಾಕಿದ ಮಜಲುಗಳನ್ನು ವಿವಿಧ ರೀತಿಯಲ್ಲಿ ಮುಂದುವರೆಸಿಕೊಂಡು ಸಾಗಿದೆ. ತನ್ನ ತಂದೆ ಹಾದಿಯಲ್ಲೇ ಸಾಗಿರುವ ರಾಬರ್ಟ್ ಕ್ಲಾರೆನ್ಸ್ ಇರ್ವಿನ್ ಮೊಸಳೆಗಳ ನುರಿತ ನಿರ್ವಾಹಕರಾಗಿದ್ದಾರೆ. ಅನೇಕ ಟಿವಿ ಪ್ರದರ್ಶನಗಳು ಮತ್ತು ಸಂರಕ್ಷಣಾ ಕಾರ್ಯಗಳ ಮೂಲಕ ರಾಬರ್ಟ್ ತಮ್ಮ ತಂದೆಗೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ.
BIG NEWS: ಕಾಲೇಜಿನ ಮೇಲೆ ಕಲ್ಲು ತೂರಾಟ; ವಿದ್ಯಾರ್ಥಿಗೆ ಗಂಭೀರ ಗಾಯ; ಬಾಗಲಕೋಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರಿಸ್ಥಿತಿ ಉದ್ವಿಗ್ನ
ತನ್ನ ತಂದೆ 2004ರಲ್ಲಿ ಮೊಸಳೆಗೆ ಆಹಾರ ನೀಡುವ ಭಂಗಿಯಿಂದ ಖ್ಯಾತನಾಮರಾಗಿದ್ದ ಆ ಅಪ್ರತಿಮ ಕ್ಷಣವನ್ನು ರಾಬರ್ಟ್ 2019ರಲ್ಲಿ ಮರುಸೃಷ್ಟಿಸಿದ್ದರು. ಈ ಚಿತ್ರವನ್ನು ಅದೇ ಸ್ಥಳದಲ್ಲಿ ಮತ್ತು ಅದೇ ಕೋನದಲ್ಲಿ ಸೆರೆ ಹಿಡಿಯಲಾಗಿದ್ದು, ಮೊಸಳೆಯೂ ಸಹ ಹಾಗೇ ಪೋಸ್ ಕೊಟ್ಟಂತೆ ಇದೆ.
ಥೇಟ್ ಅಪ್ಪನಂತೆಯೇ ಮೊಸಳೆಗಳನ್ನು ನಿರ್ವಹಿಸುವಾಗ ಅನೇಕ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ರಾಬರ್ಟ್ ಭಾರೀ ಆತ್ಮವಿಶ್ವಾಸದಿಂದ ಈ ಕ್ಷಣಗಳನ್ನು ಸಂಭಾಳಿಸುತ್ತಾರೆ.
18 ವರ್ಷದವನಾಗಿದ್ದಾಗ ರಾಬರ್ಟ್‌ಗೆ ಆಸ್ಟ್ರೇಲಿಯ ಮೃಗಾಲಯದಲ್ಲಿ ಬೃಹತ್ ಮೊಸಳೆಯೊಂದು ಹಲ್ಲೆ ಮಾಡಲು ಮುಂದಾದ ನಂತರ ಆತ ಮೃಗಾಲಯದ ಆವರಣದಿಂದ ಪಲಾಯನ ಮಾಡಬೇಕಾಗಿ ಬಂದಿತ್ತು.
ಕ್ಯಾಸ್ಪರ್ ಹೆಸರಿನ ಸಮುದ್ರ ನೀರಿನ ಈ ಮೊಸಳೆಯನ್ನು ರಾಬರ್ಟ್ ಪಳಗಿಸುತ್ತಿರುವ ಈ ವಿಡಿಯೋ ನೋಡುಗರಿಗೆ ಮೈನವಿರೇಳಿಸುತ್ತಿದೆ.
https://www.youtube.com/watch?v=TBlJYV90YsU