alex Certify ಮಡಿದ ಖ್ಯಾತ ಮೊಸಳೆ ತಜ್ಞನಿಗೆ ಮಕ್ಕಳಿಂದ ಗೌರವ ನಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಡಿದ ಖ್ಯಾತ ಮೊಸಳೆ ತಜ್ಞನಿಗೆ ಮಕ್ಕಳಿಂದ ಗೌರವ ನಮನ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸರ್. ಡೊನಾಲ್ಡ್ ಬ್ರಾಡ್‌ಮನ್, ಹೀತ್ ಲೆಡ್ಜರ್, ರಿಕಿ ಪಾಂಟಿಂಗ್ ಮತ್ತು ಹ್ಯೂ ಜ್ಯಾಕ್‌ಮನ್ ಅವರು ಕ್ರೀಡೆ, ಸಿನಿಮಾ ಮತ್ತು ಇತರ ಉದ್ಯಮಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ತಮ್ಮದೇ ಆದ ಸ್ಥಾನಮಾನವನ್ನು ಪಡೆದಿದ್ದಾರೆ. ಆದರೆ, ನಾವು ಪ್ರಸಿದ್ಧ ಆಸ್ಟ್ರೇಲಿಯನ್ನರ ಬಗ್ಗೆ ಮಾತನಾಡುವಾಗ, ನಿರ್ಲಕ್ಷಿಸಲಾಗದ ಒಬ್ಬರ ಹೆಸರಿದೆ. ಅವರು ಯಾರೆಂದರೆ, ಒಂದು ಕಾಲದಲ್ಲಿ ಪ್ರಾಣಿಗಳ ಸಾಹಸಗಳಿಗೆ ಹೆಸರುವಾಸಿಯಾದ, ಮೊಸಳೆ ತಜ್ಞ ಸ್ಟೀವ್ ಇರ್ವಿನ್ ಅವರು.

1996-2006 ವರೆಗೆ ಸ್ಟೀವ್ ಇರ್ವಿನ್ ತನ್ನ ದೂರದರ್ಶನ ಸರಣಿ ದಿ ಕ್ರೊಕೊಡೈಲ್ ಹಂಟರ್ ಪ್ರಸಾರವಾದಾಗಿನಿಂದ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ್ದಾರೆ. ಇರ್ವಿನ್, ತನ್ನ ವೃತ್ತಿಜೀವನದ ಸಮಯದಲ್ಲಿ, ಪ್ರಾಣಿಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಕ್ಕಾಗಿ ಹೆಚ್ಚಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. ಅವರು ಹಲವಾರು ಬೇಟೆ ವಿರೋಧಿ ಅಭಿಯಾನಗಳು ಮತ್ತು ಕಾರ್ಯಕ್ರಮಗಳಲ್ಲಿ ದೊಡ್ಡ ಧ್ವನಿಯಾಗಿ ಕೆಲಸ ಮಾಡಿದ್ದರು.

ದುರದೃಷ್ಟವಶಾತ್, 2006 ರಲ್ಲಿ ಅವರ ಅಕಾಲಿಕ ಮರಣದ ನಂತರ ಜನಪ್ರಿಯ ಪ್ರದರ್ಶನವು ಕೊನೆಗೊಂಡಿತು. ಅವರು ಓಷಿಯನ್ಸ್ ಡೆಡ್ಲೀಯೆಸ್ಟ್ ಎಂಬ ಹೆಸರಿನ ನೀರೊಳಗಿನ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವಾಗ ಸ್ಟಿಂಗ್ರೇ ಬಾರ್ಡ್‌ನಿಂದ ಈಟಿ ಇರಿತಕ್ಕೊಳಗಾದ್ರು.

ನವೆಂಬರ್ 15 ರಂದು ಸ್ಟೀವ್ ಇರ್ವಿನ್ ದಿನವನ್ನಾಗಿ ಆಸ್ಟ್ರೇಲಿಯಾದಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ, ಅವರ ಮಕ್ಕಳು ತಮ್ಮ ದಿವಂಗತ ತಂದೆಗೆ ಸ್ಟೀವ್ ಇರ್ವಿನ್ ಡೇ ಗುರುತಾಗಿ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

ಸ್ಟೀವ್ ಇರ್ವಿನ್ ದಿನವು, ಸ್ಟೀವ್ ಇರ್ವಿನ್ ಅವರ ಜೀವನ ಮತ್ತು ಪರಂಪರೆಯ ಆಚರಣೆಯಾಗಿದೆ. ಈ ದಿನದಂದು ಆಸ್ಟ್ರೇಲಿಯಾ ಮೃಗಾಲಯದಲ್ಲಿ ವನ್ಯಜೀವಿ ವಾರಿಯರ್ಸ್ ಗಾಗಿ ಹಣವನ್ನು ಸಂಗ್ರಹಿಸಲಾಗುತ್ತದೆ.

ಸ್ಟೀವ್ ಇರ್ವಿನ್ ದಿನದಂದು ಅವರ ಪುತ್ರ ಹಾಗೂ ಪುತ್ರಿ ತಮ್ಮ ಥ್ರೋಬ್ಯಾಕ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳುವ ಮುಖಾಂತರ ತಮ್ಮ ತಂದೆಗೆ ಹೃದಯಸ್ಪರ್ಶಿ ಗೌರವವನ್ನು ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...