alex Certify ಪ್ರೀತಿಪಾತ್ರರ ಮರಣದ ಬಳಿಕ ಮಾಡಬೇಕಾದ ಈ ಕೆಲಸಗಳ ಕುರಿತು ಇರಲಿ ಗಮನ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಪಾತ್ರರ ಮರಣದ ಬಳಿಕ ಮಾಡಬೇಕಾದ ಈ ಕೆಲಸಗಳ ಕುರಿತು ಇರಲಿ ಗಮನ !

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಅಂದ್ರೆ ಸುಲಭದ ಮಾತಲ್ಲ. ಆದರೆ ಅವರ ಮರಣದ ಬಳಿಕ ಅನಿವಾರ್ಯವಾಗಿ ನಾವು ಕೆಲವೊಂದು ಕೆಲಸವನ್ನು ಮಾಡಲೇಬೇಕಾಗುತ್ತದೆ.

ಸಹೋದರನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ತಾವು ಎದುರಿಸಿದ ಸವಾಲುಗಳ ಬಗ್ಗೆ ವಿವರಿಸಿದ್ದಾರೆ. ಸಹೋದರನನ್ನು ಕಳೆದುಕೊಂಡ ಬಳಿಕ ನಾನು ಜೀವವಿಮಾ ಕಂಪನಿಯಿಂದ ಅತ್ಯಂತ ಸುಲಭವಾಗಿ ಹಣ ಪಡೆದುಕೊಂಡಿದ್ದೇನೆ. ನಾನು ಅವರಿಗೆ ಫೋಟೋಕಾಪಿಯನ್ನು ನೀಡಿದ ಒಂದೇ ವಾರದಲ್ಲಿ ನನಗೆ ನನಗೆ ಬರಬೇಕಾದ ಹಣವನ್ನು ನೀಡಿದ್ದಾರೆ. ಮೂಲ ಅರ್ಜಿಯಲ್ಲಿ ನನ್ನ ಹೆಸರೇ ನಾಮಿನಿ ಎಂದು ಇದ್ದರೂ ಸಹ ನಾನು ಮರಣಪ್ರಮಾಣ ಪತ್ರ, ಅಫಿಡವಿಟ್​. ದೃಢೀಕರಣ ಮಾಡಲೇಬೇಕಿತ್ತು. ಆದರೆ ಕ್ರೆಡಿಟ್​ ಕಾರ್ಡ್ ರದ್ದು ಮಾಡೋದು ಸ್ವಲ್ಪ ಕಷ್ಟದಾಯಕವಾಗಿತ್ತು. ಏಕೆಂದರೆ ಅವರು ಕಾರ್ಡ್ ರದ್ದಾಗಬೇಕು ಅಂದ್ರೆ ಅರ್ಜಿದಾರರ ಸಹಿಯೇ ಬೇಕು ಎಂದು ಹೇಳಿದ್ದರು.

ದುರಾದೃಷ್ಟವಶಾತ್​ ನನ್ನ ಸಹೋದರ ವಿದೇಶಿ ಬ್ಯಾಂಕ್​ಗಳಿಂದ ಆರ್​ಬಿಐ ಬಾಂಡ್​ಗಳನ್ನು ಪಡೆದುಕೊಂಡಿದ್ದರು. ಇವರು ಮಾತ್ರ ನನಗೆ ಸ್ವಲ್ಪವು ಕರುಣೆಯನ್ನು ತೋರಿಸಲಿಲ್ಲ. ನನ್ನ ಸಹೋದರ ಹಿಂದೊಮ್ಮೆ ಇದೇ ಬ್ಯಾಂಕ್​ನಲ್ಲಿ ಸ್ಯಾಲರಿ ಅಕೌಂಟ್​ ಹೊಂದಿದ್ದರು. ಸಾಕಷ್ಟು ಮನವಿ ಮಾಡಿದ ಬಳಿಕ ಬ್ಯಾಂಕ್​ನವರು ಈ ಖಾತೆಯನ್ನು ನಮ್ಮ ಬ್ರ್ಯಾಂಚ್​ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನೀವು ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಅವರು ಗ್ರಾಹಕರಿಗೆ ಹೇಗೆ ಸೇವೆಯನ್ನು ನೀಡುತ್ತಾರೆ ಎಂಬುದನ್ನು ಸರಿಯಾಗಿ ವಿಚಾರಿಸಿ ಬಳಿಕವೇ ನಿಮ್ಮ ಖಾತೆಯನ್ನು ತೆರೆಯುವುದು ಉತ್ತಮ.

ನಿಮ್ಮ ಪ್ರೀತಿ ಪಾತ್ರರು ಮರಣ ಹೊಂದಿದ ಬಳಿಕ ಅವರ ಷೇರುಗಳು, ಬಾಂಡ್​ಗಳು ಹಾಗೂ ಆಸ್ತಿ ಪತ್ರಗಳ ಬಗ್ಗೆ ನೀವು ಕಾನೂನು ಸಲಹೆ ಪಡೆಯುವುದು ಉತ್ತಮ. ಅಲ್ಲದೇ ವಿಧವೆ ಅಥವಾ ವಿದುರರ ವಿಲ್​ ರಚನೆ ಮಾಡುವುದು ಉತ್ತಮ. ಸಂಗಾತಿಯ ಮರಣದ ಬಳಿಕ ಕೆಲವೊಂದು ವಿಮೆಯ ಪ್ರಯೋಜನ ಸಿಗದೇ ಹೋಗಬಹುದು. ನಾವು ಸಾಯಬೇಕು ಅಂತಾ ವಿಮೆ ಮಾಡಿಸೋದು ಅಲ್ಲ. ನಾವು ಸತ್ತ ಬಳಿಕ ಪಾಲಿಸಿದಾರರಿಗೆ ಸಮಸ್ಯೆ ಆಗಬಾರದು ಎಂದು ವಿಮೆ ಮಾಡಿಸುತ್ತೇವೆ. ಹೀಗಾಗಿ ನಾವು ಬದುಕಿದ್ದಾಗಲೇ ನಮ್ಮ ವಿಮೆಯ ಬಗ್ಗೆ ನಾಮಿನಿದಾರರಿಗೆ ಹೇಳುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...