
ಇತ್ತೀಚಿನ ದಿನಗಳಲ್ಲಿ ಒಂದಿಲ್ಲಾ ಒಂದು ಹೇಳಿಕೆ ನೀಡುತ್ತಾ ವಿವಾದಕ್ಕೆ ಗುರಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಮನಾಲಿಯಲ್ಲಿ ಐಶಾರಾಮಿಯಾದ ಮನೆಯೊಂದನ್ನು ನಿರ್ಮಿಸಿದ್ದಾರೆ.
ಮನಾಲಿಯಲ್ಲಿರುವ ತಮ್ಮ ಹೊಸ ಮನೆಯ ಫೋಟೋಗಳನ್ನು ಕಂಗನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
ಈ ಮನೆಯ ವಿಶೇಷತೆಯೆಂದರೆ, ದೊಡ್ಡ ಗೋಡೆಯ ಮೇಲೆ ಹಲವು ರೀತಿಯ ಆಕರ್ಷಕ ಪೇಂಟಿಂಗ್ ಗಳನ್ನು ಹಾಕುವ ಮೂಲಕ ಕಂಗನಾ ಮನೆಯನ್ನು ಕಂಗೊಳಿಸುವಂತೆ ಮಾಡಿರುವುದು. ಹಿಮಾಚಲ ಪ್ರದೇಶದ ವಿವಿಧ ಸಂಪ್ರದಾಯಗಳನ್ನು ಈ ಪೇಂಟಿಂಗ್ ಗಳಲ್ಲಿ ಕಾಣಬಹುದಾಗಿದೆ.
BIG NEWS: ಜುಲೈ 1 ರಿಂದ ಸ್ವಚ್ಛತೆ ಸ್ಥಗಿತಗೊಳಿಸಿ ಧರಣಿಗೆ ಮುಂದಾದ ಪೌರ ಕಾರ್ಮಿಕರು
ರಿವರ್ ಸ್ಟೋನ್ ನಿಂದ ನಿರ್ಮಿಸಲಾಗಿರುವ ಈ ಮನೆ ಮೌಂಟೈನ್ ಸ್ಟೈಲ್ ನಲ್ಲಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಮನಾಲಿಯ ಸುಂದರ ಮನಮೋಹಕ ಪ್ರದೇಶದ ಮಧ್ಯೆ ಇರುವ ಈ ಚೆಂದದ ಮನೆ ಮಾಡುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ ಎಂದು ಹೇಳಿಕೊಂಡಿದ್ದು, ಈ ಫೋಟೋಗಳನ್ನು ವೀಕ್ಷಿಸಿರುವ ಅವರ ಅಭಿಮಾನಿಗಳು ಮೆಚ್ಚುಗೆಯ ಜೊತೆಗೆ ಶುಭ ಹಾರೈಸಿದ್ದಾರೆ.
ಇದೊಂದು ಅತ್ಯಂತ ಸುಂದರ ಮನೆಯಾಗಿದೆ ಎಂದು ಒಬ್ಬ ಅಭಿಮಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಈ ಮನೆ ರಾಜಮಹಲಿನಂತಿದೆ ಎಂದು ಮತ್ತೋರ್ವ ಅಭಿಮಾನಿ ಹೇಳಿದ್ದಾರೆ. ಅದೇ ರೀತಿ, ಸುಂದರವಾದ ಸ್ಥಳ, ಸುಂದರವಾದ ಮಹಿಳೆ, ಎಲ್ಲವೂ ಪರಿಪೂರ್ಣವಾಗಿದೆ ಎಂದು ಇನ್ನೋರ್ವ ಅಭಿಮಾನಿ ತನ್ನ ನೆಚ್ಚಿನ ನಟಿಯ ಅಭಿರುಚಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


