ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. ಇದರ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ ಫುಡ್ ವೆಟ್ಟೈ ಹಂಚಿಕೊಂಡಿರುವ ಈ ವೀಡಿಯೊವು ದಿ ಬಿವಿಕೆ ಬಿರಿಯಾನಿ ಎಂಬ ಹೆಸರಿನ ಔಟ್ಲೆಟ್ ಅನ್ನು ತೋರಿಸುತ್ತದೆ. ಬಿರಿಯಾನಿಗಾಗಿ ಕೆಲವು ಆಯ್ಕೆಗಳಿದ್ದು, ನೀವು ಯಾವುದನ್ನು ಆಯ್ಕೆ ಮಾಡುತ್ತೀರೋ ಆ ಬಿರಿಯಾನಿ ಮಷಿನ್ನಲ್ಲಿ ಪ್ಯಾಕ್ ಮಾಡಿ ಬರುತ್ತದೆ.
ಬಿರಿಯಾನಿಗೆ ಆರ್ಡರ್ ಕೊಟ್ಟ ಮೇಲೆ ಅಲ್ಲಿ ನಿಗದಿ ಮಾಡಿದ ಮೊತ್ತವನ್ನು ಪಾವತಿಸಬೇಕು. ಪರದೆಯು ಕೆಲವು ನಿಮಿಷಗಳ ಕಾಯುವ ಸಮಯವನ್ನು ತೋರಿಸುತ್ತದೆ. ಮೂರೋ, ನಾಲ್ಕೋ ನಿಮಿಷಗಳ ಕೌಂಟ್ಡೌನ್ ಶುರುವಾಗುತ್ತದೆ. ಜೀರೋ ಆಗುತ್ತಿದ್ದಂತೆಯೇ ಸಿದ್ಧಪಡಿಸಿದ ಬಿರಿಯಾನಿ ಪ್ಯಾಕೆಟ್ ಬರುತ್ತದೆ. ಅಂದಹಾಗೆ ಇದು ಚೆನ್ನೈನ ಕೊಳತ್ತೂರಿನಲ್ಲಿದೆ.
https://youtu.be/rjvSC0I1g78