ಚರ್ಮದ ಪ್ರತಿಯೊಂದು ಸಮಸ್ಯೆಯನ್ನು ಸ್ಟೀಮ್ ಬಗೆಹರಿಸುತ್ತದೆ. ನೀವು ಉಗಿಯನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕಲ್ಮಷ ದೂರವಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.
ಸುಂದರ ತ್ವಚೆಗೆ ಸ್ಟೀಮ್ ಬಹಳ ಉತ್ತಮ. ಉಗಿ, ಮೂಗಿನ ಮೂಲಕ ನಮ್ಮ ದೇಹವನ್ನು ತಲುಪುತ್ತದೆ. ಬಿಸಿ ಉಗಿ ದೇಹದೊಳಗಿರುವ ಬ್ಯಾಕ್ಟೀರಿಯಾ ನಾಶಪಡಿಸುತ್ತದೆ. ಸ್ಟೀಮ್ ನಿಂದ ಅನೇಕ ಲಾಭಗಳಿವೆ.
ದೊಡ್ಡ ಪಾತ್ರೆಯಲ್ಲಿ ಮೂರ್ನಾಲ್ಕು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಗ್ಯಾಸ್ ಮೇಲಿಟ್ಟು ನೀರನ್ನು ಕುದಿಸಿ. ನೀರು ಬಿಸಿಯಾದ ಮೇಲೆ ಗ್ಯಾಸ್ ಬಂದ್ ಮಾಡಿ. ಆ ನಂತ್ರ ಉಗಿಯನ್ನು ತೆಗೆದುಕೊಳ್ಳಿ.
ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳುವುದ್ರಿಂದ ಸಾಕಷ್ಟು ಲಾಭವಿದೆ. ಶುಷ್ಕ ಚರ್ಮದ ಸಮಸ್ಯೆ ಇದ್ರಿಂದ ದೂರವಾಗುತ್ತದೆ.
ವಾರದಲ್ಲಿ ಮೂರ್ನಾಲ್ಕು ದಿನ ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ ಡೆಡ್ ಸ್ಕಿನ್ ನಷ್ಟವಾಗುತ್ತದೆ. ಚರ್ಮದ ಮೇಲಿರುವ ಕೊಳಕು ಹೋಗಿ ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹೆಚ್ಚು ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ವಾರದಲ್ಲಿ ನಾಲ್ಕೈದು ದಿನ ಅಗತ್ಯವಾಗಿ ಉಗಿ ತೆಗೆದುಕೊಳ್ಳಬೇಕು.