alex Certify ಮಳೆಗಾಲದಲ್ಲಿ ರೋಗ ರುಜಿನಗಳಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ರೋಗ ರುಜಿನಗಳಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ

Why Should You Avoid Street Food In Monsoon: 5 Handy Tips To Eat Out This Season - NDTV Foodಮಳೆಗಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತು. ಮಳೆಗಾಲದ ರೋಗ ರುಜಿನಗಳಿಂದ ದೂರವಿರಬೇಕಾದ್ರೆ ಈ ಆಹಾರಗಳಿಂದ ದೂರವಿರಿ.

ಕರಿದ ತಿನಿಸುಗಳು

ಮಳೆಗಾಲದ ಚುಮು ಚುಮು ಚಳಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳು ನಾಲಿಗೆಗೆ ಸಖತ್ ರುಚಿ ಎನಿಸುತ್ತವೆ. ಆದರೆ ಇಂತಹ ಪದಾರ್ಥಗಳ ಸೇವನೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಯಾಕಂದ್ರೆ ಎಣ್ಣೆ ಪದಾರ್ಥಗಳ ಸೇವನೆಯಿಂದ ಕೆಮ್ಮು ಸಮಸ್ಯೆ ಶುರುವಾಗುತ್ತದೆ.

ಬೀದಿ ಬದಿಯ ಆಹಾರ

ಮಳೆಗಾಲದಲ್ಲಿ ಬೀದಿ ಬದಿಯ ಆಹಾರ ಬೇಡವೇ ಬೇಡ. ಜ್ಯೂಸ್, ಐಸ್ ಕ್ರೀಂ, ಕ್ಯಾಂಡಿ ಮಳೆಗಾಲಕ್ಕೆ ಸೂಕ್ತವಲ್ಲ. ಇದರಲ್ಲಿರುವ ತೇವಾಂಶ ಶೀತ ಬೇಗ ಬರಲು ಸಹಕರಿಸುತ್ತದೆ.

ಸೊಪ್ಪುಗಳು

ಅಡುಗೆ ಮನೆಯಲ್ಲಿ ಮಳೆಗಾಲದಲ್ಲಿ ಸೊಪ್ಪುಗಳ ಬಳಕೆ ಕಡಿಮೆ ಮಾಡಿ. ಸೊಪ್ಪುಗಳಲ್ಲಿ ಆರೋಗ್ಯಕ್ಕೆ ಬೇಕಾದಂತಹ ಅನೇಕ ಪೋಷಕಾಂಶಗಳು ಸಿಗುತ್ತವೆ ನಿಜ. ಆದರೆ ಇದರಲ್ಲಿಯ ತಂಪು ಗುಣ ಬೇಸಿಗೆಗೆ ಸೂಕ್ತ. ಕೆಲ ತರಕಾರಿಗಳನ್ನು ಕೂಡ ಮಳೆಗಾಲದಲ್ಲಿ ದೂರವಿಡುವುದು ಸೂಕ್ತ.

ಮಸಾಲ ಅಡುಗೆಗಳು

ಮಳೆಗಾಲದಲ್ಲಿ ಸೇವಿಸುವ ಆಹಾರಗಳೆಲ್ಲವೂ ಬೇಗ ಜೀರ್ಣವಾಗುವುದಿಲ್ಲ. ನಾನ್ ವೆಜ್ ಪ್ರಿಯರಾಗಿದ್ದರೆ ಮಾಂಸಾಹಾರ ಬದಲು ಹೆಲ್ದಿ ಸೂಪ್ ಗಳನ್ನು ತೆಗೆದುಕೊಳ್ಳುವುದು ಒಳಿತು. ಅಲ್ಲದೆ ಮಸಾಲ ಪುರಿ ಇಂತಹ ಪದಾರ್ಥಗಳಿಂದಲೂ ದೂರವಿರಿ.

ಸೀ ಫುಡ್

ಇನ್ನು ಮಳೆಗಾಲದಲ್ಲಿ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಪ್ರಿಯವಾಗುವುದು ಸೀ ಫುಡ್. ಮನೆಯಲ್ಲೇ ಆಗಲಿ, ಪ್ರವಾಸದ ವೇಳೆಯೇ ಆಗಲಿ ಇದರಿಂದ ದೂರವಿದ್ದರೆ ಆರೋಗ್ಯ ವೃದ್ಧಿಸುತ್ತೆ. ಮಳೆಗಾಲದಲ್ಲಿ ಮೀನು, ಫ್ರಾನ್ಸ್ ಮತ್ತು ಕ್ರ್ಯಾಬ್ ಗಳು ಮೊಟ್ಟೆಯಿಡುವ ಸಮಯ. ಈ ಸಂದರ್ಭದಲ್ಲಿ ಇವುಗಳ ಸೇವನೆ ಅಷ್ಟೇನು ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...