ಬಾಹ್ಯಾಕಾಶದಲ್ಲಿರುವ ಎಲ್ಲಾ ಗ್ರಹಣಗಳು ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತವೆ. ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ, ನವೆಂಬರ್ ತಿಂಗಳಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣವು ನವೆಂಬರ್ 19 ರ ಬುಧವಾರ ರಾತ್ರಿ ಭಾರತೀಯ ಕಾಲಮಾನದ ಪ್ರಕಾರ, ಸಂಜೆ 5.33 ಕ್ಕೆ ಸಂಭವಿಸಲಿದೆ. ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ರೆ ಗ್ರಹಣ ಜಾತಕದ ಮೇಲೆ ನೇರ ಪರಿಣಾಮ ಬೀರಲಿದೆ.
ಕೊನೆಯ ಚಂದ್ರ ಗ್ರಹಣ ರಾಶಿಯೊಂದರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎನ್ನಲಾಗ್ತಿದೆ. ನವೆಂಬರ್ ನಲ್ಲಿ ಸಂಭವಿಸುವ ಈ ಚಂದ್ರಗ್ರಹಣ, ವೃಷಭ ರಾಶಿಯ ಜನರ ಮೇಲೆ ಪರಿಣಾಮ ಬೀರಲಿದೆ. ಈ ದಿನ ಕೇತು ಗ್ರಹವು ವೃಶ್ಚಿಕ ರಾಶಿಯಲ್ಲಿ ಉಳಿಯುತ್ತದೆ. ಆದ್ದರಿಂದ, ಈ ಸಮಯದಲ್ಲಿ ವ್ಯಕ್ತಿಯು ಯಾವುದೇ ರೀತಿಯ ಕಾನೂನುಬಾಹಿರ ಕೆಲಸವನ್ನು ಮಾಡಬಾರದು. ಮಾದಕ ವಸ್ತುಗಳಿಂದ ದೂರವಿರಲು ಪ್ರಯತ್ನಿಸಬೇಕು. ಎಲ್ಲಿಯೂ ಹಣ ಹೂಡಿಕೆ ಮಾಡಬಾರದು.
ವೃಷಭ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕು. ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಚಂದ್ರ ಗ್ರಹಣದ ಸಮಯದಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ರಾಹು, ವೃಷಭ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ, ಮಾತು ನಿಯಂತ್ರಣ ತಪ್ಪಿದ್ರೆ ನಷ್ಟವಾಗುತ್ತದೆ.