ಬೆಂಗಳೂರು: ರಾಜ್ಯದಾದ್ಯಂತ ಎಲ್ಲಾ ಮಾದರಿಯ ಟ್ಯಾಕ್ಸಿ ಪ್ರಯಾಣದರ, ಸಾಗಣೆ ದರ ಏರಿಕೆ ಮಾಡಲಾಗಿದೆ. ರಾಜ್ಯದಾದ್ಯಂತ ಏಕರೂಪ ದರ ನಿಗದಿಪಡಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಟ್ಯಾಕ್ಸಿ ಪ್ರಯಾಣ ದರ ಏಕರೂಪವಾಗಿದ್ದು, ಮೊದಲ ನಾಲ್ಕು ಕಿಲೋಮೀಟರ್ ಗೆ ವಾಹನಗಳ ಬೆಲೆ ಆಧಾರದಲ್ಲಿ ಕನಿಷ್ಟ ದರ ಮಾಡಲಾಗಿದೆ. ವಿವಿಧ ದರಗಳಿಗೆ ಬ್ರೇಕ್ ಹಾಕಲಾಗಿದ್ದು, ಏಕ ರೂಪದ ನಿಗದಿ ಮಾಡಲಾಗಿದೆ.
ಒಂದೇ ಮಾದರಿ ಪ್ರಯಾಣದ ಅನುಸಾರ ಬೆಂಗಳೂರು ಸೇರಿ ರಾಜ್ಯದೆಲ್ಲಿಡೆ ಟ್ಯಾಕ್ಸಿ ಪ್ರಯಾಣದರ ಮೊದಲ ನಾಲ್ಕು ಕಿಲೋಮೀಟರ್ ಗಳಿಗೆ ವಾಹನಗಳ ಬೆಲೆಯ ಆಧಾರದಲ್ಲಿ ಕನಿಷ್ಠ 110 ರೂ., 115 ರೂ., 130 ರೂ. ಎಂದು 3 ವರ್ಗದಲ್ಲಿ ನಿಗದಿಪಡಿಸಲಾಗಿದೆ. ಹಳೆಯ ದರಕ್ಕೆ ಹೋಲಿಸಿದರೆ ಕನಿಷ್ಠ 25 ರೂಪಾಯಿ ಏರಿಕೆಯಾಗಿದೆ.
ಓಲಾ, ಉಬರ್ ಸೇರಿ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ ಟ್ಯಾಕ್ಸಿ ಗಳಿಗೆ ಇದ್ದ ಬೇರೆ ಬೇರೆ ದರಕ್ಕೆ ಕಡಿವಾಣ ಹಾಕಲಾಗಿದೆ. ರಾಜ್ಯದಾದ್ಯಂತ ಪ್ರಯಾಣದರ ರಾತ್ರಿ 12 ಗಂಟೆ ನಂತರ ಶೇ. 10 ರಷ್ಟು ಹೆಚ್ಚಿಸಲು ಅವಕಾಶ ನೀಡಲಾಗಿದೆ.
ವೈಯಕ್ತಿಕ ಲಗೇಜ್ ಗಳಿಗೆ ಸೂಟ್ಕೇಸ್ ಸೇರಿದಂತೆ 120 ಕೆಜಿ ವರೆಗೆ ಉಚಿತವಾಗಿದ್ದು, ನಂತರದ ಪ್ರತಿ 30 ಕೆಜಿಗೆ 7 ರೂಪಾಯಿ ನಿಗದಿಪಡಿಸಲಾಗಿದೆ. ಕಾಯುವಿಕೆ ದರಗಳು ಮೊದಲು ಐದು ನಿಮಿಷ ಉಚಿತವಾಗಿದ್ದು, ನಂತರದ ಪ್ರತಿಯೊಂದು ನಿಮಿಷಕ್ಕೆ ಒಂದು ರೂಪಾಯಿ ದರ ಪ್ರಯಾಣಿಕರು ಪಾವತಿಸಬೇಕು. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಸಾಮಾನ್ಯ ದರದ ಮೇಲೆ ಶೇಕಡ 10 ರಷ್ಟು ಹೆಚ್ಚುವರಿ ದರ ಪಡೆದುಕೊಳ್ಳಬಹುದು.
10 ಲಕ್ಷ ರೂಪಾಯಿ ಮೌಲ್ಯದ ವಾಹನಗಳಿಗೆ ಆರಂಭದ ನಾಲ್ಕು ಕಿಲೋಮೀಟರ್ ವರೆಗೆ 100 ರೂ. ನಂತರ ನಂತರ ಪ್ರತಿ ಕಿಲೋಮೀಟರ್ 24 ರೂ. ದರ ನಿಗದಿಪಡಿಸಲಾಗಿದೆ.
10 ಲಕ್ಷದಿಂದ 15 ಲಕ್ಷ ರೂಪಾಯಿ ಬೆಲೆಯ ವಾಹನಗಳಿಗೆ ಕನಿಷ್ಠ ಮೊದಲ ನಾಲ್ಕು ಕಿಲೋ ಮೀಟರ್ ಗೆ ಕನಿಷ್ಠ ದರ 115 ಬಳಿಕ ಪ್ರತಿ ಕಿ.ಮೀ.ಗೆ 28 ರೂಪಾಯಿ, 15 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಮೊದಲ 4 ಕಿಲೋಮೀಟರ್ 130 ರೂ., ನಂತರ ಹೆಚ್ಚುವರಿ ಕಿಲೋಮೀಟರ್ ಗೆ 32 ರೂಪಾಯಿ ದರ ನಿಗದಿಪಡಿಸಲಾಗಿದೆ.