ಇಂದೋರ್: ಮಧ್ಯಪ್ರದೇಶ ಲೋಕಸೇವಾ ಆಯೋಗದ(ಎಂಪಿಪಿಎಸ್ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಶುಕ್ರವಾರ ರಾತ್ರಿ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
21 ವರ್ಷದ ಪುನೀತ್ ದುಬೆ ಬಿಎಸ್ಸಿ ಓದುತ್ತಿದ್ದು, ಇಂದೋರ್ನ ರಂಜಿತ್ ಸಿಂಗ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತರು ಸೀರೆ ಮತ್ತು ಮಹಿಳೆಯರ ಮೇಕ್ಅಪ್ ಧರಿಸಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಮೃತದೇಹದ ಬಳಿ ನೆಲದ ಮೇಲೆ ರಕ್ತದ ಮಡುವು ಇತ್ತು. ಪುನೀತ್ ಸಾವನ್ನು ಆತ್ಮಹತ್ಯೆ ಮತ್ತು ಕೊಲೆ ಕೋನದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂರು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. ಕೊಠಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಪುನೀತ್ ಅವರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು.
ಪುನೀತ್ ಅವರ ತಂದೆ, ರೈತ ಮುಖಂಡರಾದ ಉದಯಪುರ ನಿವಾಸಿ ತ್ರಿಭುವನ್ ದುಬೆ ಅವರು, ತಮ್ಮ ಮಗ ಎರಡು ವರ್ಷಗಳ ಹಿಂದೆ ಅಧ್ಯಯನಕ್ಕಾಗಿ ಇಂದೋರ್ಗೆ ತೆರಳಿದ್ದು, ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ರಾತ್ರಿಯಿಡೀ ಮನೆಗೆ ಕರೆ ಮಾಡುತ್ತಿದ್ದ. ಗುರುವಾರ ರಾತ್ರಿ 10 ಗಂಟೆಗೆ ಅವರ ತಾಯಿ ವಿಭೂತಿ ದುಬೆ ಅವರೊಂದಿಗೆ ಪುನೀತ್ ಅವರ ಕೊನೆಯ ಸಂಭಾಷಣೆ ನಡೆಸಿದ್ದಾನೆ. ಕೋಚಿಂಗ್ ಸೆಂಟರ್ನಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಇರುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮನೆಯವರು ಪುನೀತ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಶುಕ್ರವಾರ ಇಡೀ ದಿನ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ. ಅದರ ನಂತರ, ಅವರು ಪುನೀತ್ ಅವರ ಸಂಬಂಧಿಕರು ಮತ್ತು ಇಂದೋರ್ನಲ್ಲಿರುವ ಅವರ ಕೆಲವು ಸ್ನೇಹಿತರನ್ನು ಸಂಪರ್ಕಿಸಿದರು. ಅವರು ಅವನ ಕೋಣೆಯನ್ನು ತಲುಪಿದರು, ಆದರೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು, ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಬಾಗಿಲು ತೆರೆದಾಗ ಪುನೀತ್ ಅವರ ಶವ ಕಂಡು ಬಂದಿದೆ.
ಪುನೀತ್ ಅವರ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪುನೀತ್ ಅವರ ಹಾಸ್ಟೆಲ್ ರೂಂ ಮೇಟ್ ಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪುನೀತ್ ದುಬೆ ಅವರ ಮರಣೋತ್ತರ ಪರೀಕ್ಷೆಯ ನಂತರ, ಅವರ ಅಂತಿಮ ವಿಧಿಗಳನ್ನು ನೆರವೇರಿಸಲು ಅವರ ದೇಹವನ್ನು ಉದಯಪುರಕ್ಕೆ ಕೊಂಡೊಯ್ಯಲಾಯಿತು. ತ್ರಿಭುವನ್ ದುಬೆ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.