ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯುವ ಸಾಧ್ಯತೆ ಇದೆ. ನಾವು ಸನ್ಯಾಸಿಗಳಲ್ಲ, ಅಂತಹ ಪರಿಸ್ಥಿತಿ ಬಂದರೆ ನಿಭಾಯಿಸುತ್ತೇವೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ತ್ಯಾಗ ಮಾಡುವ ಅನಿವಾರ್ಯತೆ ಬರುತ್ತದೆ. ಹೀಗಾಗಿ ಸಿದ್ದರಾಮಯ್ಯ ತ್ಯಾಗದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಸೋನಿಯಾ ಗಾಂಧಿ ಅವರು ಏನೂ ದೊಡ್ಡ ತ್ಯಾಗ ಮಾಡಿಲ್ಲ. ಸುಮ್ಮನೆ ಅವರ ಪಕ್ಷದವರು ತ್ಯಾಗ ಮಾಡಿದ್ದಾರೆ ಎಂದು ಹೇಳುತ್ತಾರೆ. ರಾಹುಲ್ ಗಾಂಧಿ ಏನು ತ್ಯಾಗ ಮಾಡಿದ್ದಾರೆ ಎಂದು ಹೇಳಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಡಿನ್ನರ್ ಪಾರ್ಟಿ, ಟಿಫನ್ ಪಾರ್ಟಿ ಆಯ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹಿಂದೆ ಹೇಳಿದ್ದೆವು. ಡಿ.ಕೆ. ಶಿವಕುಮಾರ್ ಒದ್ದು ಅಧಿಕಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಸಿದ್ದರಾಮಯ್ಯ ತ್ಯಾಗ ಮಾಡುತ್ತೇನೆ ಎಂದಿರಬೇಕು. ಯಾರನ್ನು ಒದೆಯುತ್ತಾರೆ, ಯಾರು ಒದೆಸಿಕೊಳ್ಳುತ್ತಾರೆ ಎಂದು ನಂತರ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಆಗುತ್ತಾರೆ ಎಂದು ಕೆಲವು ನಾಯಕರು ಎದ್ದು ಕೂತಿದ್ದಾರೆ. ಪರಮೇಶ್ವರ್ ಪರ ಕೆಲವರು, ಡಿಕೆ ಪರ ಕೆಲವರು ಸಿಎಂ ಆಗ್ತಾರೆ ಎಂದು ಹೇಳುತ್ತಿದ್ದಾರೆ. ಮುಂದೆ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.