alex Certify ಧಾರವಾಡದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ : ವೈಯಕ್ತಿಕ ಸಾಮೂಹಿಕ ಸ್ಪರ್ಧೆಗಳ ವಿವರ ಇಲ್ಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರವಾಡದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ : ವೈಯಕ್ತಿಕ ಸಾಮೂಹಿಕ ಸ್ಪರ್ಧೆಗಳ ವಿವರ ಇಲ್ಲಿದೆ

ಧಾರವಾಡ : ಶಾಲಾ ಶಿಕ್ಷಣ ಇಲಾಖೆಯು ಧಾರವಾಡ ನಗರದಲ್ಲಿ ನಾಳೆಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ 23 ವೈಯಕ್ತಿಕ ಹಾಗೂ ಮೂರು ಸಾಮೂಹಿಕ ಸ್ಪರ್ಧೆಗಳನ್ನು ಆಯೋಜಿಸಿದೆ.

ಪ್ರತಿ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಐದು ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುತ್ತಿದೆ.

1) ಭಾಷಣ ಸ್ಫರ್ಧೆ: ನಾಳೆ ಫೆ.8 ರಿಂದ ಆರಂಭವಾಗುವ, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಕನ್ನಡ, ಇಂಗ್ಲೀಷ, ಹಿಂದಿ, ಸಂಸ್ಕøತ, ಉರ್ದು, ಮರಾಠಿ, ತುಳು, ಕೊಂಕಣಿ, ತೆಲಗು, ತಮಿಳು ಬಾಷೆಯಲ್ಲಿ ಭಾಷಣ ಸ್ಪರ್ಧೆಗಳು ಜೆ.ಎಸ್.ಎಸ್.ಕಾಲೇಜು ಆವರಣದ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದಲ್ಲಿ ಜರುಗಲಿವೆ.

2) ಧಾರ್ಮಿಕ ಪಠಣ ಸ್ಪರ್ಧೆ: ನಾಳೆ ಫೆ.8 ರಿಂದ ಆರಂಭವಾಗುವ, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಸಂಸ್ಕøತ, ಅರೇಬಿಕ್ ಭಾಷೆಯಲ್ಲಿ ಧಾರ್ಮಿಕ ಪಠಣ ಸ್ಪರ್ಧೆಗಳು ಜೆ.ಎಸ್.ಎಸ್.ಕಾಲೇಜು ಆವರಣದ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದಲ್ಲಿ ಜರುಗಲಿವೆ.

3) ಜಾನಪದ, ಭಾವಗೀತೆ ಸ್ಪರ್ಧೆ: ನಾಳೆ ಫೆ.8 ರಿಂದ ಆರಂಭವಾಗುವ, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಜಾನಪದ ಗೀತೆ ಮತ್ತು ಭಾವಗೀತೆ ಸ್ಪರ್ಧೆಗಳು ಜೆ.ಎಸ್.ಎಸ್.ಕಾಲೇಜು ಆವರಣದ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದಲ್ಲಿ ಜರುಗಲಿವೆ.

4) ಭರತ ನಾಟ್ಯ ಸ್ಪರ್ಧೆ: ನಾಳೆ ಫೆ.8 ರಿಂದ ಆರಂಭವಾಗುವ, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಭರತ ನಾಟ್ಯ ಸ್ಪರ್ಧೆಗಳನ್ನು ಜೆ.ಎಸ್.ಎಸ್.ಕಾಲೇಜು ಆವರಣದ ಧರ್ಮಸ್ಥಳ ರತ್ನಮ್ಮ ಹೆಗಡೆ ಭವನದಲ್ಲಿ ಜರುಗಲಿವೆ.

5) ಛದ್ಮವೇಶ, ಮಿಮಿಕ್ರಿ, ಗಜಲ, ಆಶುಭಾಷಣ ಸ್ಪರ್ಧೆಗಳು: ಈ ಎಲ್ಲ ಸ್ಪರ್ಧೆಗಳು ನಾಳೆ ಫೆ.8 ರಿಂದ ಆರಂಭವಾಗಲಿದ್ದು, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಸ್ಪರ್ಧೆಗಳನ್ನು ಜೆ.ಎಸ್.ಎಸ್.ಕಾಲೇಜು ಆವರಣದ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದಲ್ಲಿ ಆಯೋಜಿಸಲಾಗಿದೆ.

6) ಚಿತ್ರಕಲೆ, ಚರ್ಚಾಸ್ಪರ್ಧೆ, ರಂಗೋಲಿ, ಕವನವಾಚನ ಸ್ಪರ್ಧೆಗಳು: ಈ ಎಲ್ಲ ಸ್ಪರ್ಧೆಗಳು ನಾಳೆ ಫೆ.8 ರಿಂದ ಆರಂಭವಾಗಲಿದ್ದು, ಈ ಸ್ಪರ್ಧೆಯಲ್ಲಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಸ್ಪರ್ಧೆಗಳನ್ನು ಜೆ.ಎಸ್.ಎಸ್.ಕಾಲೇಜು ಆವರಣದ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದಲ್ಲಿ ಆಯೋಜಿಸಲಾಗಿದೆ.

7) ಸಾಮೂಹಿಕ ವಿಭಾಗದ ಸ್ಪರ್ಧೆಗಳು; ಈ ವಿಭಾಗದಲ್ಲಿ ಜಾನಪದ ನೃತ್ಯ, ಕವ್ವಾಲಿ, ಕ್ವಿಜ್ ಸ್ಪರ್ಧೆಗಳನ್ನು ಆಯೊಜಿಸಲಾಗುತ್ತಿದ್ದು, ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿವೆ.

ಜಾನಪದ ನೃತ್ಯ ಸ್ಪರ್ಧೆಯನ್ನು ಜೆ.ಎಸ್.ಎಸ್.ಕಾಲೇಜು ಆವರಣದ ಸನ್ನಿಧಿ ಕಲಾಕ್ಷೇತ್ರ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಕವ್ವಾಲಿ ಸ್ಪರ್ಧೆಯನ್ನು ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕಟ್ಟಡದ 8ಎ ಕೊಠಡಿಯಲ್ಲಿ ಆಯೋಜಿಸಲಾಗಿದೆ. ಮತ್ತು ಕ್ವಿಜ್ ಸ್ಪರ್ಧೆಯನ್ನು ಜೆ.ಎಸ್.ಎಸ್.ಕಾಲೇಜು ಆವರಣದ ಉತ್ಸವ ಹಾಲ್‍ದಲ್ಲಿ ಆಯೋಜಿಸಲಾಗಿದೆ.

ಸ್ಪರ್ಧಾಳುಗಳಿಗೆ ಅಗತ್ಯ ಮಾಹಿತಿ ನೀಡಲು ಜೆಎಸ್‍ಎಸ್ ಕಾಲೇಜು ಆವರಣದಲ್ಲಿ ಸುಮಾರು ಎಂಟು ಮಾಹಿತಿ ಕೇಂದ್ರಗಳನ್ನು ತೆರಯಲಾಗಿದೆ. 26 ವಿವಿಧ ಸ್ಪರ್ಧೆಗಳಲ್ಲಿ 1229 ಸ್ಪರ್ಧಾಳುಗಳು ಭಾಗವಹಿಸುತ್ತಿದ್ದು, 78 ಜನ ತಿರ್ಪುಗಾರರು ಫಲಿತಾಂಶ ನೀಡಲಿದ್ದಾರೆ ಎಂದು ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...