
ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಹಬ್ಬವಾದ ಬಳಿಕ ಬಹುತೇಕ ಹಿಂದೂಗಳು ಮಾಂಸಾಹಾರವನ್ನು ಸೇವಿಸುತ್ತಾರೆ.
ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನವನ್ನು ಆರಂಭಿಸಿದ್ದಾರೆ.
ಹಿಂದೂ ವ್ಯಾಪಾರಿಗಳ ಅಂಗಡಿಯಿಂದಲೇ ಮಾಂಸ ಖರೀದಿಸುವಂತೆ ಕರೆ ನೀಡಿದ್ದು, ಈ ಮೂಲಕ ಹಲಾಲ್ ಹಣ ದೇಶದ್ರೋಹದ ಕೃತ್ಯಗಳಿಗೆ ಹೋಗದಂತೆ ತಡೆಯಿರಿ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ. ಅಲ್ಲದೇ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರಿಂದ ಯಾವುದೇ ವಸ್ತು ಖರೀದಿಸದಂತೆ ಹೇಳಿದ್ದಾರೆ.