
ಬೆಂಗಳೂರು : ರಾಜ್ಯ ಸರ್ಕಾರವು ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಮೋಜಿಣಿ ವ್ಯವಸ್ಥೆ ಅಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಮೇಲೆ ಓದಲಾದ ಕ್ರ.ಸಂ. (1) ಮತ್ತು (3) ರ ಆದೇಶಗಳಲ್ಲಿ ಈ ಕೆಳಕಂಡಂತೆ ನಿಗಧಿಪಡಿಸಲಾಗಿತ್ತು. ಹಾಗೆಯೇ, ಮೇಲೆ ಓದಲಾದ ಕ್ರ.ಸಂ. (2) ರ ಸರ್ಕಾರದ ಆದೇಶದಲ್ಲಿ, ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಪಾವತಿಸುತ್ತಿರುವ ಸೇವಾ ಶುಲ್ಕವನ್ನು 800/- ರಿಂದ 1200/- ಗಳಿಗೆ ಹಾಗೂ ಬಹುಮಾಲೀಕತ್ವದ ಪ್ರತಿ ಹೆಚ್ಚುವರಿ ಬ್ಲಾಕಿಗೆ ರೂ 150/- ರಿಂದ 200/- ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.
ರಾಜ್ಯ ಸರ್ಕಾರದ ಅದೇಶದಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಜಮೀನಿನಲ್ಲಿ ‘ಸ್ವಾವಲಂಬಿ ಆವ್’ ಮೂಲಕ ಸ್ವಯಂ ಸರ್ವೆ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರ.ಸಂ. (7) ರ ಆದೇಶದಲ್ಲಿ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಲಾಗಿದೆ.
ಮೇಲಿನ ಸರ್ಕಾರದ ಆದೇಶಗಳಲ್ಲಿ ಅರ್ಜಿ ಶುಲ್ಕವನ್ನು ನಿರ್ದಿಷ್ಟವಾಗಿ ಪಹಣಿ ಕಾಲಂ-3 ಅಥವಾ ಕಾಲಂ-9 ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಪಹಣಿಯ 900-3 ರಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಅದೇ ರೀತಿಯಲ್ಲಿ, ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9 ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸುವ ಸಲುವಾಗಿ ಪಹಣಿಯ ಕಾಲಂ-3 ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಆದರೆ ಪಹಣಿಯ ಕಾಲಂ-3 ರ ವಿಸ್ತೀರ್ಣ ಹೆಚ್ಚಿಗೆ ಇದ್ದು ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023 ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪ್ರಸ್ತಾಪಿಸಿರುತ್ತಾರೆ. ಜೊತೆಗೆ, ಅರ್ಜಿದಾರರು / ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ.
ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.
ಪ್ರಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.



