![](https://kannadadunia.com/wp-content/uploads/2020/12/vidhana-soudha-750-1-jpg_710x400xt-1.jpg)
ಬೆಂಗಳೂರು : 2023-24ನೇ ಸಾಲಿನಲ್ಲಿ ಪಿಎಂ ಪೋಷಣೆ ಯೋಜನೆಯಡಿ ಎಲ್ಲಾ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಅಡುಗೆ ಸ್ಪರ್ಧೆಯನ್ನು (Cooking Competition) ಕಾರ್ಯಕ್ರಮವನ್ನು ಆಯೋಜಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಪತ್ರದಲ್ಲಿ ಸೂಚಿಸಿ ವಿವರಿಸಿರುವಂತೆ, ಇತ್ತೀಚೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ಎಲ್ಲಾ ತಾಲ್ಲೂಕುಗಳ ಶಿಕ್ಷಣಾಧಿಕಾರಿಯವರಿಗೆ ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕರು (ಪಿಎಂಪೋಷಣ್), ರವರಿಗೆ 2023-24ನೇ ಸಾಲಿನಲ್ಲಿ ಅಡುಗೆ ಕೇಂದ್ರಗಳಲ್ಲಿ ಪ್ರತಿ ದಿನ ಶಾಲಾ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ವಿತರಿಸುವ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅಡುಗೆ ಸಿಬ್ಬಂದಿಗಳಿಗೆ ವಿಶೇಷವಾಗಿ ಈ ಕೆಳಕಂಡ ಉದ್ದೇಶಗಳಿಗಾಗಿ ಅಡುಗೆ ತಯಾರಿಕಾ ಸ್ಪರ್ಧೆಯನ್ನು ಕೈಗೊಂಡು ಅವರು ಹೆಚ್ಚು ವೃತ್ತಿಪರರಾಗಲು ಹಾಗೂ ಅವರಲ್ಲಿರುವ ಅಡುಗೆ ತಯಾರಿಕಾ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸಿ ಇಲಾಖೆಯಿಂದ ಉತ್ತೇಜಿಸುವುದು ಅವಶ್ಯಕವಾಗಿರುತ್ತದೆ.
ಅಡುಗೆ ಸಿಬ್ಬಂದಿಗೆ ವಿಶೇಷವಾಗಿ ‘ಅಡುಗೆ ತಯಾರಿಸುವ ಸ್ಪರ್ಧೆ ಏರ್ಪಡಿಸುವ ಉದ್ದೇಶಗಳು :
- ಶಾಲಾ ಅಡುಗೆಯವರು ಹೊಂದಿರುವ ಅಡುಗೆ ತಯಾರಿಕಾ ವೃತ್ತಿ ಕೌಶಲ್ಯ, ಆಸಕ್ತಿ, ಕಾಳಜಿ ಮತ್ತು ವಿವಿಧ ಮಾದರಿಗಳ ಅಡುಗೆಯನ್ನು ಸರಳವಾಗಿ ಮತ್ತು ವೇಗವಾಗಿ ತಯಾರಿಸುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು.
- ಸ್ಥಳೀಯವಾಗಿ ಲಭ್ಯವಾಗುವ ಪೌಷ್ಟಿಕತೆ ಹೇರಳವಾಗಿರುವುದು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ಶುಚಿ- ರುಚಿಯಾಗದ ವೈವಿಧ್ಯಮತವಾಗ ನಾವೀನ್ಯತೆಯಿಂದ ಕೂಡಿದ ಅಡುಗೆ ತಯಾರಿಸುವ ಕಲೆಯನ್ನು ಶಾಲಾ ಅಡುಗೆಯವರಲ್ಲಿ ಅಭಿವೃದ್ಧಿಪಡಿಸುವುದು,
- ಅಡುಗೆ ಕೆಲಸದಲ್ಲಿ ಮಿತವ್ಯಯ ಸಾಧಿಸುವ, ಆಹಾರ ಪದಾರ್ಥಗಳಲ್ಲಿರುವ ಉತ್ತಮ ಪೌಷ್ಟಿಕತೆ ಮತ್ತು ಗುಣಮಟ್ಟವನ್ನು ಗುರುತಿಸುವ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಜ್ಞಾನ. ತಿಳುವಳಿಕೆಯನ್ನು ಶಾಲಾ ಅಡುಗೆಯವರಲ್ಲಿ ಪ್ರೋತ್ಸಾಹಿಸುವುದು.
- ಮಧ್ಯಾಹ್ನ ಉಪಹಾರದಲ್ಲಿ ವಾರದ ಮೆನುವಿನಲ್ಲಿರುವ ವೈವಿಧ್ಯಮಯ ಆಹಾರ ಮಾದರಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಗುಣಮಟ್ಟ ಹಾಗೂ ಸ್ವಚ್ಚತೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಅದರಲ್ಲೂ ಸ್ಥಳೀಯವಾಗಿ ಹಸಿರು ತರಕಾರಿಗಳನ್ನು, ಬೇಳೆ-ಕಾಳುಗಳನ್ನು, ವಿವಿಧ ಬಗೆಯ ಸಿರಿಧಾನ್ಯಗಳನ್ನು ದಂಟು-ಸೊಪ್ಪುಗಳನ್ನು ಉಪಯೋಗಿಸಿಕೊಂಡು ಅತ್ಯುತ್ತಮ ಶುಚಿ-ರುಚಿಯಿಂದ ಅಡುಗೆ ತಯಾರಿಸುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು.
- ಸ್ಥಳೀಯ ಸಾಂಪ್ರದಾಯಿಕ ಪೌಷ್ಟಿಕ ಆಹಾರ ಪದ್ಧತಿ, ಜಾನಪದ ಊಟೋಪಚಾರಗಳ ಬಗ್ಗೆ ಹೊಂದಿರುವ ವಿಶೇಷ ಜ್ಞಾನ, ಆಸಕ್ತ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಶಾಲಾ ಅಡುಗೆಯವರಲ್ಲಿ ಗುರುತಿಸಿ ಬಲಪಡಿಸುವುದು.
![](https://kannadadunia.com/wp-content/uploads/2024/01/WhatsApp-Image-2024-01-11-at-8.03.44-PM.jpeg)
![](https://kannadadunia.com/wp-content/uploads/2024/01/WhatsApp-Image-2024-01-11-at-8.03.45-PM-1.jpeg)
![](https://kannadadunia.com/wp-content/uploads/2024/01/WhatsApp-Image-2024-01-11-at-8.03.45-PM.jpeg)
![](https://kannadadunia.com/wp-content/uploads/2024/01/WhatsApp-Image-2024-01-11-at-8.03.46-PM.jpeg)
![](https://kannadadunia.com/wp-content/uploads/2024/01/WhatsApp-Image-2024-01-11-at-8.03.47-PM.jpeg)