ಬೆಂಗಳೂರು: ಪಿಂಜಾರ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ -1 ರ ಪಿಂಜಾರ, ನದಾಫ್ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಲಾಗಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ -1 ರಲ್ಲಿ ನಮೂದಾಗಿರುವ ಕಸಾಬ್, ಕಸಾಯ್, ಒಟಾರಿ, ನಾಲಬಂದ್, ತಕನರ, ಬಾಜಿಗಾರ್, ಚಪ್ಪರ್ ಬಂದ್, ಜೋಹರಿ, ಫುಲ್ ಮಾಲಿ, ಪಿಂಜಾರ, ಪಿಂಜಾರಿ, ನದಾಫ್, ಲದಾಫ್ ಸಮುದಾಯಗಳ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ -1ರ ಪಿಂಜಾರ ನದಾಫ್ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ.