ಬೆಂಗಳೂರು: ವಿಧಾನ ಪರಿಷತ್ ನಲ್ಲಿ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ತಿದ್ದುಪಡಿ ವಿಧೇಯಕ ತಿರಸ್ಕೃತಗೊಂಡಿದೆ.
ಉಪ ಸಭಾಪತಿ ಪ್ರಾಣೇಶ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದ್ದರು. ವಿಧೇಯಕದ ಪರ 7 ಮತ್ತು ವಿರೋಧವಾಗಿ 18 ಮತ ಚಲಾವಣೆಯಾಗಿದೆ. ಬಿಲ್ ತಿರಸ್ಕಾರಗೊಂಡ ನಂತರ ಬಿಜೆಪಿ ಸದಸ್ಯರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕೀ ಜೈ ಮತ್ತು ಜೈ ಭೀಮ್ ಎಂದು ಘೋಷಣೆ ಕೂಗಿದ್ದಾರೆ.