alex Certify ಕರ್ನಾಟಕದ ಸರ್ವತೋಮುಖ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದ : ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ಸರ್ವತೋಮುಖ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದ : ಸಚಿವ ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ :    ಕರ್ನಾಟಕ ರಾಜ್ಯ ವೈವಿಧ್ಯತೆಗಳನ್ನು ಹೊಂದಿರುವ ಹಲವು ಜಗತ್ತುಗಳ ಒಂದು ರಾಜ್ಯ, ಇಲ್ಲಿನ ಸರ್ವ ಜನಾಂಗದ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಜಿಲ್ಲಾಡಳಿತದಿಂದ ನವೆಂಬರ್ 1 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ 69 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 1956 ರಲ್ಲಿ ಏಕೀಕರಣಗೊಂಡ ಮೈಸೂರು ರಾಜ್ಯವನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈಗಾಗಲೇ ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿದ್ದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಹಲ್ಮಿಡಿ ಶಿಲಾಶಾಸನದ ಪ್ರತಿಕೃತಿಯನ್ನು ಪ್ರತಿಷ್ಟಾಪಿಸಲಾಗಿದೆ.

ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ದಾವಣಗೆರೆ ನಗರದ ಗಾಜಿನಮನೆಯ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬ, ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆ ಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವವಾಗಿದೆ. ಕಾವೇರಿಯಿಂದ ಗೋದಾವರಿವರೆಗೆ ವಿಸ್ತಾರವಾಗಿ ಹರಡಿದ್ದ ನಾಡು ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಸಾಮ್ರಾಟ ಅಶೋಕ ಹಾಗೂ ಶಾತವಾಹನರ ಆಳ್ವಿಕೆಯಲ್ಲಿಯೂ ಕನ್ನಡ ಭಾμÉಯ ಬಳಕೆಯನ್ನು ಕಾಣಬಹುದು. ರಾಜ ಮನೆತನಗಳಾದ ಕದಂಬ, ಗಂಗರು, ಚಾಲುಕ್ಯ, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರ ಕಾಲದಲ್ಲಿ ಕನ್ನಡ ಭಾμÉಯು ಸಾಹಿತ್ಯಿಕವಾಗಿ ಹಾಗೂ ಜನಮನದ ಭಾಷೆಯಾಗಿ ಹುಲುಸಾಗಿ ಬೆಳೆದು ಬಂದಿತು.

ಕಳೆದ 5 ದಶಕಗಳಲ್ಲಿ ರಾಜ್ಯದ ಬೆಳವಣಿಗೆಯನ್ನು ಅವಲೋಕಿಸಿದರೆ ಆಡಳಿತ, ಸಂಸ್ಕøತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮನ್ನಣೆ ಪಡೆಯಲಾಗಿದೆ. ನಾಡು ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಈಗಿನÀ ಯುವ ಜನರಿಗೆ ಪ್ರೇರಣಾದಾಯಕವಾಗಿದೆ. ಅವರೂ ಸಹ ಕನ್ನಡ ನಾಡಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡು ರಚನಾತ್ಮಕ ಸಾಧನೆಗಳನ್ನು ಮಾಡುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಆಕರ್ಷಕ ಪಥ ಸಂಚಲನ: 15 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪ್ಲಟೂನ್ ಕಮಾಂಡರ್‍ನೊಂದಿಗೆ ಪಾಲ್ಗೊಂಡವು. ಮಹೇಶ್ ಪಾಟೀಲ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಾಗರ್ ಅತರವಾಲ್ ನಗರ ಪೊಲೀಸ್ ತಂಡ, ಅಮರೇಶ್ ಗೃಹರಕ್ಷಕದಳ, ಟಿ.ಆರ್.ಪರಶುರಾಮಪ್ಪ ಜಿಲ್ಲಾ ಅಗ್ನಿ ಶಾಮಕ ದಳ, ಎ.ಆರ್.ಜಿ ಶಾಲೆಯ ಚಿನ್ಮಯಿ, ಜಿಎಫ್‍ಜಿಸಿ ಎನ್.ಸಿ.ಸಿ ಬಸವರಾಜ.ಜಿ, ಎವಿಕೆ ಕಾಲೇಜಿನ ಎನ್.ಸಿ.ಸಿ ಕುಮಾರಿ ತರುಣಾ ರಮೇಶ್. ಒಡೆಯರ್, ಸೆಂಟ್ ಪೌಲ್ಸ್ ಸ್ಕೂಲ್ ಎನ್.ಸಿ.ಸಿ ಚಂದನ, ಭಾರತ ಸೇವಾದಳ ಆರ್‍ಎಂಎಸ್‍ಎ ಐಶ್ವರ್ಯ.ಎಂ, ಭಾರತ್ ಸ್ಕೌಟ್ಸ್ & ಗೈಡ್ಸ್ ಡಿಸ್ಟಿಕ್ ಟ್ರೂಪ್ ಗಲ್ರ್ಸ್ ಮಾನಸ .ಡಿ.ಸಿ, ಸಿದ್ದಗಂಗಾ ಹೈಸ್ಕೂಲ್ ವಿಭಾಗದಿಂದ ರೋಷಿಣಿ, ತರಳುಬಾಳು ಹೈಸ್ಕೂಲ್‍ನಿಂದ ದೀಪಾ.ವೈ, ಸಿದ್ದಗಂಗಾ ಪ್ರೈಮರಿ ಸ್ಕೂಲ್ ವಿಭಾಗದಿಂದ ಮಧುಪ್ರಿಯಾ, ಸರ್ಕಾರಿ ಬಾಲಕರ ಹೈಸ್ಕೂಲ್ ವಿಭಾಗದಿಂದ ಓಂಕಾರ್ ಈ.ಯು, ಸೆಂಟ್ ಜಾನ್ಸ್ ಹೈಸ್ಕೂಲ್ ಗಲ್ರ್ಸ್ ವಿಭಾಗದಿಂದ ಗೀತಾಂಜಲಿ ಮತ್ತು ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡ ಭಾಗವಹಿಸಿದ್ದವು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 33 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಿಟ್ಟುವಳ್ಳಿಯ ಟಿ.ಶ್ರೀನಿವಾಸ್ ಶಿಲ್ಪಕಲೆ, ದಾವಣಗೆರೆ ಮೇಘಾಚಾರಿ.ವಿ., ನಗರದ ಬಂಬೂಬಜಾರ್‍ನ ಕೆ.ಆರ್.ಮೌನೇಶ್ವರ್ ಶಿಲ್ಪಿ, ಇವರುಗಳು ಶಿಲ್ಪಕಲೆ ಕ್ಷೇತ್ರ,

ಜಗಳೂರಿನ ಬಸವರಾಜು.ಟಿ, ಚನ್ನಗಿರಿಯ ಎ.ಎನ್ ಶಶಿಕಿರಣ್, ದಾವಣಗೆರೆಯ ಎಂ. ಬಸಣ್ಣ ಇವರುಗಳು ಸಂಗೀತ ಕ್ಷೇತ್ರದಲ್ಲಿ, ಮಾಯಕೊಂಡ ಪೀರಿಬಾಯಿ ಕೋಂ ಉಮ್ಲನಾಯ್ಕ, ಹರಿಹರದ ಹೆಚ್.ಪಿ. ನಾಗೇಂದ್ರಪ್ಪ, ಗುತ್ತೂರಿನ ಎಸ್.ಕೆ.ವೀರೇಶ್ ಕುಮಾರ್, ನಗರದ ಶೇಖರಪ್ಪ ನಗರದ ಪಿ.ಮೀನಾಕ್ಷಿ ಇವರುಗಳು ಜಾನಪದ ಕ್ಷೇತ್ರ,

ದಾವಣಗೆರೆಯ ಎ.ಎಂ.ಪ್ರಕಾಶ್ ಮುದ್ರಣಾ ಕ್ಷೇತ್ರ, ವಿನೋಬನಗರದ ಎಂ. ಮನು ಮತ್ತು ಹೊನ್ನಾಳಿಯ ಬಿ.ತಿಮ್ಮನಗೌಡ ಸಂಕೀರ್ಣ ಕ್ಷೇತ್ರದಲ್ಲಿ, ನಿಜಲಿಂಗಪ್ಪ ಬಡಾವಣೆಯ ಶ್ರೀನಾಥ.ಪಿ.ಅಗಡಿ ಛಾಯಾಗ್ರಹಣ, ಜಾಲಿನಗರದ ಎಸ್.ಪಿ.ಲಾವಣ್ಯ ಶ್ರೀಧರ್ ಯೋಗ, ಜಗಳೂರಿನ ಬಡಪ್ಪ ಬಯಲಾಟ, ಯಲ್ಲಮ್ಮ ನಗರದ ವಿನಾಯಕ ನಾಕೋಡ, ಎಸ್.ಎಂ.ಕೃಷ್ಣ ನಗರದ ಕೆ.ಎಸ್.ಕೊಟ್ರೇಶ್ ಇವರುಗಳು ರಂಗಭೂಮಿ ಕ್ಷೇತ್ರ, ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ಎಸ್.ವಿ.ವಿಶ್ವನಾಥ ಬಯಲಾಟ, ದೊಡ್ಡಾಟ,

ನಿಜಲಿಂಗಪ್ಪ ಬಡಾವಣೆಯ ರವಿಕುಮಾರ್.ಎ.ಜೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣಕುಮಾರ್ ಇವರುಗಳು ಸಮಾಜ ಸೇವೆ,

ರವಿಕುಮಾರ್ ಕನ್ನಡಪ್ರಭ ಪತ್ರಿಕೆಯ ವರದಿಗಾರರು, ಎಂ.ಬಿ.ನವೀನ್, ವಿಜಯವಾಣಿ ಸ್ಥಾನಿಕ ಸಂಪಾದಕರು, ಹೆಚ್.ಟಿ ಪರಶುರಾಮ ಪಬ್ಲಿಕ್ ಟಿ.ವಿ ಕ್ಯಾಮರಾಮ್ಯಾನ್, ಒ.ಎನ್ ಸಿದ್ದಯ್ಯ ಜನತಾವಾಣಿ ಪತ್ರಿಕೆ, ಕೆ.ಎಸ್ ಚನ್ನಬಸಪ್ಪ ಆಕಾಶವಾಣಿ-ನಗರವಾಣಿ, ಮಂಜುನಾಥ.ಎಂ.ಎಸ್ ಪತ್ರಿಕಾ ವಿತರಕರು ಇವರುಗಳು ಪತ್ರಿಕೋದ್ಯಮ ಕ್ಷೇತ್ರ,

ವಿನೋಬನಗರದ ಸಂತೋಷ್ ದೊಡ್ಮನಿ, ಶುಭಮಂಗಳ ಬಿ.ಎಸ್, ನಾಗರಾಜ ಜಮ್ನಳ್ಳಿ, ಚನ್ನಗಿರಿಯ ಎಲ್.ಜಿ.ಮಧುಕುಮಾರ್ ಇವರುಗಳು ಕನ್ನಡ ಪರ ಹೋರಾಟ, ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ ಸಾಹಿತ್ಯ ಕ್ಷೇತ್ರ, ಕುಕ್ಕವಾಡ ಗ್ರಾಮದ ಕೆ.ಟಿ.ಚಂದ್ರಶೇಖರಪ್ಪ ಕೃಷಿ ಕ್ಷೇತ್ರ

ಕಣ್ಮನ ಸಳೆದ ಸಾಂಸ್ಕøತಿಕ ನೃತ್ಯ: ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ, ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಹಾಗೂ ಕೊಡಗನೂರು ನಾಗರಾಜ್ ಇವರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗೆ ಹೆಜ್ಜೆ ಹಾಕಿದರು.

ಮೆರವಣಿಗೆ; ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು, ಕನ್ನಡತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕಲಾತಂಡಗಳೊಂದಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...