
ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 49,058 ಜನರಿಗೆ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,90,104 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 328 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 17,212 ಮಂದಿ ಮೃತಪಟ್ಟಿದ್ದಾರೆ. 18,943 ಮಂದಿ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 12,55,797 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಬರೋಬ್ಬರಿ 5,17,075 ಸಕ್ರಿಯ ಪ್ರಕರಣಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ 23,706 ಜನರಿಗೆ ಸೋಂಕು ತಗಲಿದ್ದು 139 ಮಂದಿ ಸಾವನ್ನಪ್ಪಿದ್ದಾರೆ. 3,32,732 ಸಕ್ರಿಯ ಪ್ರಕರಣಗಳಿವೆ.