ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಬ್ಲಾಕ್ ಫಂಗಸ್ ಕೇಸ್ ಪತ್ತೆಯಾಗಿದ್ದು, ಇದುವರೆಗೆ 1370 ಮಂದಿಗೆ ಸೋಂಕು ತಗುಲಿದೆ. 27 ಮಂದಿ ಗುಣಮುಖರಾಗಿದ್ದಾರೆ. 1292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೆ ಬೆಂಗಳೂರು 557, ಧಾರವಾಡ 156, ಕಲಬುರ್ಗಿ 104, ಬಾಗಲಕೋಟೆ 70, ವಿಜಯಪುರ 57, ಬಳ್ಳಾರಿ 42, ರಾಯಚೂರು 46, ಶಿವಮೊಗ್ಗ 38, ದಕ್ಷಿಣಕನ್ನಡ, ಮೈಸೂರು ತಲಾ 35, ಚಿತ್ರದುರ್ಗ 34, ದಾವಣಗೆರೆ 26, ಬೆಂಗಳೂರು ಗ್ರಾಮಂತರ 20, ಕೊಪ್ಪಳ 16, ಗದಗ 11, ಉಡುಪಿ 10, ತುಮಕೂರು 10, ಹಾಸನ 9 ಮತ್ತು ಹಾವೇರಿ 8 ಸೇರಿದಂತೆ 1370 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ.