ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ಜುಲೈ ಒಂದರಿಂದ ಬ್ಯಾಂಕ್ ದೊಡ್ಡ ಬದಲಾವಣೆ ಮಾಡ್ತಿದೆ. ಗ್ರಾಹಕರು ಬ್ಯಾಂಕ್ ಗೆ ಸಂಬಂಧಿಸಿದ ಕೆಲ ಸೇವೆಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಎಟಿಎಂ ಹಣ ವಿತ್ ಡ್ರಾ ಹಾಗೂ ಚೆಕ್ ಬುಕ್ ನಲ್ಲಿ ಬದಲಾವಣೆಯಾಗಲಿದೆ.
ದೇಶದ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐನಲ್ಲಿ ಬಿಎಸ್‌ಬಿಡಿ ಖಾತೆ ಹೊಂದಿದ್ದರೆ ಆ ಗ್ರಾಹಕರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಬಿಎಸ್‌ಬಿಡಿ ಖಾತೆಯನ್ನು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ಎಂದು ಕರೆಯಲಾಗುತ್ತದೆ. ಬಡ ಜನರಿಗೆ ಈ ಖಾತೆ ತೆರೆಯಲಾಗಿದೆ. ಈ ಖಾತೆದಾರರು ತಿಂಗಳಿಗೆ ನಾಲ್ಕು ಬಾರಿ ಎಟಿಎಂ ಅಥವಾ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಬಹುದು. ಉಚಿತ ವಹಿವಾಟಿನ ಮಿತಿ ನಂತ್ರ ಪ್ರತಿ ವಹಿವಾಟಿಗೆ 15 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಎಸ್ಬಿಐ ಎಟಿಎಂ ಮಾತ್ರವಲ್ಲ ಯಾವುದೇ ಬ್ಯಾಂಕ್ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಿದ್ರೂ ಇದು ಅನ್ವಯವಾಗಲಿದೆ.
ಹಣಕಾಸು ವರ್ಷದಲ್ಲಿ ಗ್ರಾಹಕರಿಗೆ 10 ಪುಟಗಳ ಚೆಕ್ ಬುಕ್ ಉಚಿತವಾಗಿ ನೀಡಲಾಗುತ್ತದೆ. ನಂತ್ರ 10 ಪೇಜ್ ಚೆಕ್ ಬುಕ್ ಗಾಗಿ 40 ರೂಪಾಯಿ ಪಾವತಿ ಮಾಡಬೇಕು. 25 ಪೇಜ್ ಚೆಕ್ ಬುಕ್ ಗಾಗಿ 75 ರೂಪಾಯಿ ಪಾವತಿಸಬೇಕು. ಇದ್ರ ಜೊತೆಗೆ ಜಿಎಸ್ಟಿ ವಿಧಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಈ ಯಾವುದೇ ನಿಯಮ ಅನ್ವಯವಾಗುವುದಿಲ್ಲ.