ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ ನಿಮಗೊಂದು ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ ಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದ್ರೆ ಗ್ರಾಹಕರಿಗೆ ಸಮಸ್ಯೆಯಾಗಲಿದೆ ಎಂದು ಬ್ಯಾಂಕ್ ಸೂಚನೆ ನೀಡಿದೆ.
ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ತಿಳಿಸಿದೆ. ಈ ಬಗ್ಗೆ ಬ್ಯಾಂಕ್ ಟ್ವೀಟ್ ಮಾಡಿದೆ. ಪಾನ್ ಮತ್ತು ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ನಿಷ್ಕ್ರಿಯಗೊಳ್ಳಲಿದೆ. ಇದ್ರಿಂದ ವಹಿವಾಟಿಗೆ ತೊಂದೆಯಾಗಲಿದೆ.
ಬ್ಯಾಂಕ್ ವ್ಯವಹಾರದಲ್ಲಿ ಯಾವುದೇ ಅಡೆತಡೆಯಾಗಬಾರದು ಎಂದಾದಲ್ಲಿ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿ ಎಂದು ಬ್ಯಾಂಕ್ ಸೂಚಿಸಿದೆ. ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಆಧಾರ್ ಮತ್ತು ಪಾನ್ ಲಿಂಕ್ ದಿನಾಂಕವನ್ನು ಜೂನ್ 30 ಕ್ಕೆ ವಿಸ್ತರಿಸಿದೆ. ಸರ್ಕಾರ ಮೊದಲ ಬಾರಿ ಜುಲೈ 2017ರ ಗಡುವು ನೀಡಿತ್ತು. ಅಂದಿನಿಂದ ಸರ್ಕಾರ ಅನೇಕ ಬಾರಿ ಗಡುವನ್ನು ವಿಸ್ತರಿಸಿದೆ.