ಸ್ಟಾರ್ಟ್ ಅಪ್‌ಗಳ ಮೇಲೆ ಹೂಡಿಕೆ ಮಾಡಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಹಾಗೂ ಜೀವ ವಿಮಾ ನಿಗಮ (ಎಪ್‌ಐಸಿ) ಆಸಕ್ತಿ ತೋರಿವೆ.
ಈ ಸಂಬಂಧ ಎಲ್‌ಐಸಿ ಹಾಗೂ ಇಪಿಎಫ್‌ಓಗಳೊಂದಿಗೆ ಚೌಕಟ್ಟು ಕಟ್ಟಿಕೊಳ್ಳಲು ಸ್ಟಾರ್ಟ್‌ಅಪ್‌ಗಳಿಗೆ ನಿಧಿ ಹೊಂದಿಸುವ ಸಿಬಿಡಿ ವ್ಯವಸ್ಥೆ ಮಾಡುತ್ತಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಶ್ ಗೋಯೆಲ್ ನೇತೃತ್ವದ ರಾಷ್ಟ್ರೀಯ ಸ್ಟಾರ್ಟ್‌ಅಪ್ ಸಲಹಾ ಸಮಿತಿಯ ಸಭೆಯೊಂದರ ವೇಳೆ ಈ ವಿಷಯ ಪ್ರಸ್ತಾಪಿಸಲಾಗಿದೆ.
“ವ್ಯವಹಾರ ನಡೆಸಲು ಸರಳವಾದ ವಾತಾವರಣ ಸೃಷ್ಟಿಸಲು ಕಟಿಬದ್ಧವಾದ ಸರ್ಕಾರ ಅನಗತ್ಯವಾದ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಿ, ಸ್ಟಾರ್ಟ್ ಅಪ್ ಕೋಶ ನಿಧಿ ರೂಪದಲ್ಲಿ ಆರ್ಥಿಕ ನೆರವು ನೀಡಲು ಸಿದ್ಧವಾಗಿದೆ. ಇನ್‌ಕ್ಯೂಬೇಟರ್‌ಗಳಿಗೆ ಬೆಂಬಲ ಕೊಟ್ಟು, ಕೌಶಲ್ಯ ವರ್ಧನೆಗೆ ಕ್ರಮ ತೆಗೆದುಕೊಂಡು ತನ್ಮೂಲಕ ಬಂಡವಾಳ ಕ್ರೋಢೀಕರಣ, ಆವಿಷ್ಕಾರ, ಪ್ರಯೋಗಾಲಯಗಳು ಹಾಗೂ ಸಾಮರ್ಥ್ಯ ನಿರ್ಮಾಣ ವೃದ್ಧಿ ಸಂಬಂಧ ಇರುವ ಸವಾಲುಗಳನ್ನು ಎದುರಿಸಲು ಸರ್ಕಾರ ಉತ್ಸುಕವಾಗಿದೆ” ಎಂದು ಗೋಯೆಲ್ ಸಭೆ ಸಂದರ್ಭ ತಿಳಿಸಿದ್ದಾರೆ.