ಅಬುದಾಬಿಯಲ್ಲಿ ಇಂದಿನಿಂದ ಮಾಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಸೋಂಕನ್ನ ಪತ್ತೆ ಮಾಡಲು ಫೇಸ್ ಸ್ಕ್ಯಾನರ್ಗಳನ್ನ ಬಳಕೆ ಮಾಡಲು ಆರಂಭಿಸಲಾಗಿದೆ. 2000ಕ್ಕೂ ಅಧಿಕ ಮಂದಿ ಮೇಲೆ ನಡೆಸಲಾದ ಪ್ರಯೋಗದಲ್ಲಿ ಹೆಚ್ಚಿನ ಮಟ್ಟದ ಪರಿಣಾಮಕಾರತ್ವ ಕಂಡು ಬಂದಿದೆ.
ಈ ತಂತ್ರಜ್ಞಾನವು ವಿದ್ಯುತ್ಕಾಂತೀಯ ತರಂಗಗಳನ್ನ ಬಳಕೆ ಮಾಡಿ ಸೋಂಕನ್ನ ಪತ್ತೆ ಮಾಡುವ ಕಾರ್ಯ ಮಾಡುತ್ತದೆ. ಇದು ವೈರಸ್ನ ಆರ್ಎನ್ಎ ಕಣಗಳು ದೇಹದಲ್ಲಿ ಇದ್ದಾಗ ಇದು ಬದಲಾಗುತ್ತದೆ. ಇದರಿಂದ ಹೊರಬಂದ ಫಲಿತಾಂಶಗಳಲ್ಲಿ 93.5 ಪ್ರತಿಶತ ಸೂಕ್ಷ್ಮತೆ ತೋರಿಸಿದ್ದು ಸೋಂಕಿತರನ್ನ ಗುರುತಿಸುವಲ್ಲಿ ನಿಖರತೆ ಹೊಂದಿದೆ.
ಈ ವಿಶೇಷ ಸ್ಕ್ಯಾನರ್ಗಳನ್ನ ಅಬುದಾಬಿಯ ಇಡಿಇ ಸಂಶೋಧನಾ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಅರಬ್ ರಾಷ್ಟ್ರದ ರಾಜಧಾನಿಯಾಗಿರುವ ಅಬುದಾಬಿಯು ವಿಶ್ವದಲ್ಲೇ ಅತೀ ಹೆಚ್ಚು ಲಸಿಕೆ ಪೂರೈಕೆಯ ದತ್ತಾಂಶವನ್ನ ಹೊಂದಿದೆ.