ನಿರಂತರವಾಗಿ ಬೆಲೆ ಏರಿಕೆಯಾಗ್ತಿರುವ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಹಗಲು-ರಾತ್ರಿ ದುಡಿದರೂ ಸಂಪಾದನೆ ಸಾಲುತ್ತಿಲ್ಲ. ಕೆಲಸದ ಜೊತೆ ಪರ್ಯಾಯ ಮಾರ್ಗವನ್ನು ಜನರು ಹುಡುಕುತ್ತಿದ್ದಾರೆ. ಕೇವಲ 15-20 ನಿಮಿಷ ಮೊಬೈಲ್ ನಲ್ಲಿ ಕಳೆಯುವ ಮೂಲಕವೂ ನೀವು ಹಣ ಸಂಪಾದನೆ ಮಾಡಬಹುದು. ಆನ್ಲೈನ್ ನಲ್ಲಿ ಈ ತರಹದ ವರ್ಕ್ ಫ್ರಂ ಹೋಂ ಕೆಲಸಗಳು ಸಾಕಷ್ಟಿವೆ. ಎಲ್ಲವನ್ನೂ ನಂಬುವುದು ಕಷ್ಟ. ನಂಬಿಕಸ್ತ ಸೈಟ್ ನಲ್ಲಿ ಕೆಲಸ ಮಾಡುವ ಮೂಲಕ ನೀವು ಸಂಪಾದನೆ ಮಾಡಬಹುದು.
ಹಳ್ಳಿಯಲ್ಲೂ ಈಗ ನೆಟ್ವರ್ಕ್ ಬಂದಿರುವ ಕಾರಣ, ಆರಾಮವಾಗಿ ನೀವಿರುವ ಜಾಗದಿಂದಲೇ ಕೆಲಸ ಮಾಡಬಹುದು. ಈ ಕೆಲಸಕ್ಕಾಗಿ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಅವಶ್ಯಕತೆಯಿದೆ.
ಫೋಟೋಗ್ರಫಿಯ ಹವ್ಯಾಸವಿದ್ದರೆ ಆನ್ಲೈನ್ ಮೂಲಕವೇ ನೀವು ಸಾಕಷ್ಟು ಗಳಿಸಬಹುದು.ಆನ್ಲೈನ್ ನಲ್ಲಿ ಫೋಟೋಗಳಿಗೆ ಸಾಕಷ್ಟು ಬೇಡಿಕೆಯಿದೆ. ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್‌ಗಳು ಫೋಟೋಗಳ ಬೃಹತ್ ಭಂಡಾರವಾಗಿದೆ. ಅಲ್ಲಿ ನೀವು ತೆಗೆದ ಫೋಟೋಗಳನ್ನು ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದು. ಪಿಕ್ಸೆಲ್, ಪಿಕ್ಸಾಬೇ, ಶಟ್ಟರ್ಸ್ಟಾಕ್ ಹಾಗೂ ಅಪ್ ಸ್ಪ್ಲ್ಯಾಶ್ ನಂತಹ ಅನೇಕ ವೆಬ್ಸೈಟ್ ಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಫೋಟೋಗಳನ್ನು ಸೇಲ್ ಮಾಡುವ ಮಾಧ್ಯಮವಾಗಿದೆ.
ವಿಡಿಯೋ ಮೂಲಕವೂ ಹಣ ಸಂಪಾದನೆ ಮಾಡಬಹುದಾಗಿದೆ. ಇಂದು ಯೂಟ್ಯೂಬ್ ವಿಡಿಯೋ ನೋಡುವ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಯೂಟ್ಯೂಬ್ ಎಷ್ಟು ದೊಡ್ಡ ವಿಡಿಯೋ ಹಬ್ ಆಗಿ ಬೆಳೆದಿದೆ ಅಂದ್ರೆ ಯೂಟ್ಯೂಬ್‌ನ ಅಕೌಂಟ್ ಹೊಂದಿರದವರು ಯಾರೂ ಇರಲಿಕ್ಕಿಲ್ಲ. ದೊಡ್ಡ ಕಂಪನಿಗಳಿಂದ ಹಿಡಿದು ಚಲನಚಿತ್ರ ತಾರೆಯರು ಅಥವಾ ಸಾಮಾನ್ಯ ಜನರವರೆಗೆ ಎಲ್ಲರೂ ಸಹ ವಿಡಿಯೊ ಮಾಡುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಆಸಕ್ತಿಯಿರುವ ಕ್ಷೇತ್ರದ ಬಗ್ಗೆಯೇ ನೀವು ವಿಡಿಯೋ ತಯಾರಿಸಿ ಅಪ್ಲೋಡ್ ಮಾಡಿ ಹಣ ಗಳಿಸಬಹುದು.