ಈಗಿನ ಪರಿಸ್ಥಿತಿಯಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವಂತಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಸ್ವಂತ ಉದ್ಯೋಗ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ ಬರುವ ವ್ಯವಹಾರ ಶುರು ಮಾಡಿ.
ಉತ್ತಮ ಲಾಭ ಬರುವ ವ್ಯವಹಾರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕೂಡ ಒಂದು. ಇದಕ್ಕೆ ಸರ್ಕಾರದಿಂದ ಧನ ಸಹಾಯವೂ ಸಿಗುತ್ತದೆ. ಇದನ್ನು ಶುರು ಮಾಡಲು ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಕೇವಲ 15 ಸಾವಿರ ರೂಪಾಯಿಗೆ ನೀವು ವ್ಯವಹಾರ ಶುರು ಮಾಡಬಹುದು.
ಮುದ್ರಾ ಸಾಲ ಯೋಜನೆಯಡಿ ಸರ್ಕಾರವು ಕೈಗೆಟುಕುವ ದರದಲ್ಲಿ ಸಾಲವನ್ನು ನೀಡುತ್ತದೆ. ಈ ವ್ಯವಹಾರದ ಮೂಲಕ ಮೊದಲ ವರ್ಷದಲ್ಲಿ 1 ಲಕ್ಷ 10 ಸಾವಿರ ರೂಪಾಯಿಗಳನ್ನು ಗಳಿಸಬಹುದು. ಮುಂದಿನ ವರ್ಷದಿಂದ ಲಾಭ ಹೆಚ್ಚಾಗುತ್ತದೆ.
ದಿನಕ್ಕೆ 180 ಪ್ಯಾಕೆಟ್‌ಗಳನ್ನು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು 1.45 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ಶೇಕಡಾ 90 ರಷ್ಟು ಅಂದರೆ 1.30 ಲಕ್ಷ ರೂಪಾಯಿಗಳನ್ನು ಮುದ್ರಾ ಯೋಜನೆಯಿಂದ ತೆಗೆದುಕೊಳ್ಳಬಹುದು. ಉಳಿದ 15 ಸಾವಿರವನ್ನು ಪಾವತಿಸಿದರೆ ಸಾಕು. ಇದನ್ನು ಚಿಕ್ಕದಾಗಿ ಪ್ರಾರಂಭಿಸಲು 16×16 ಚದರ ಅಡಿ ಕೋಣೆ ಸಾಕಾಗುತ್ತದೆ.