ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಬಯಸಿದ್ದರೆ ಉತ್ತಮ ಅವಕಾಶವಿದೆ.
ಹಿರಿಯ ಉದ್ಯಮಿ ರತನ್ ಟಾಟಾ, ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿರುವ ಕಂಪನಿ ನಿಮಗೆ ಅವಕಾಶ ನೀಡ್ತಿದೆ. ಜೆನೆರಿಕ್ ಡ್ರಗ್ ಸ್ಟಾರ್ಟ್ ಅಪ್ ಕಂಪನಿ, ಸಾಮಾನ್ಯ ಜನರಿಗೆ ಫ್ರ್ಯಾಂಚೈಸಿ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತಿದೆ. ಒಮ್ಮೆ ಹೂಡಿಕೆ ಮಾಡಿ ಜೆನೆರಿಕ್ ಔಷಧಿ ಅಂಗಡಿ ತೆರೆದು, ಪ್ರತಿ ತಿಂಗಳು ಉತ್ತಮ ಆದಾಯ ಗಳಿಸಬಹುದು.
ಯಾವುದೇ ವ್ಯಕ್ತಿ, ಇದರ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಈ ವ್ಯವಹಾರ ಆರಂಭಿಸಲು ಕೇವಲ 1 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಗುತ್ತದೆ. ಈ ಫ್ರ್ಯಾಂಚೈಸಿಯ ಬಹುದೊಡ್ಡ ಪ್ರಯೋಜನವೆಂದರೆ ಕಂಪನಿಯು ತನ್ನ ಪಾಲುದಾರರಿಗೆ ಶೇಕಡಾ 40ರಷ್ಟು ಮಾರ್ಜಿನ್ ನೀಡುತ್ತದೆ. ಉಳಿದ ಔಷಧಿ ಕಂಪನಿಗಳು ಗರಿಷ್ಠ ಶೇಕಡಾ 15-20ರಷ್ಟು ಮಾರ್ಜಿನ್ ನೀಡುತ್ತವೆ. ಕಂಪನಿಯು 1000 ಬಗೆಯ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತದೆ. ಈ ಔಷಧಿಗಳ ಮೇಲೆ ಗ್ರಾಹಕರು ಶೇಕಡಾ 80ರಷ್ಟು ರಿಯಾಯಿತಿ ಪಡೆಯುತ್ತಾರೆ.
ಇದರಲ್ಲಿರುವ ದೊಡ್ಡ ಅನುಕೂಲವೆಂದರೆ ಕಂಪನಿ ಆನ್‌ಲೈನ್ ಔಷಧಿ ಆರ್ಡರ್ ಪಡೆಯುತ್ತದೆ. ಆರ್ಡರ್ ನಿಮ್ಮ ನಗರದಿಂದ ಬಂದಿದ್ದರೆ ನೀವು ಸಪ್ಲೈ ಮಾಡಬೇಕಾಗುತ್ತದೆ. ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಮುಂಬೈನ, ಉತ್ತರ ಪ್ರದೇಶದಲ್ಲಿ ಇಂತಹ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು 8-10 ಲಕ್ಷದವರೆಗೆ ಕಂಪನಿಯ ಫ್ರ್ಯಾಂಚೈಸ್ ಪಡೆದು ಗಳಿಸುತ್ತಿದ್ದಾರೆ. ಈ ಫ್ರ್ಯಾಂಚೈಸಿ ಪಡೆಯಲು https://genericaadhaar.com/ ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಬೇಕು.