ಸ್ವಂತ ವ್ಯವಹಾರ ಶುರು ಮಾಡಲು ಬಯಸಿದ್ದರೆ ಉತ್ತಮ ಅವಕಾಶವಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಗಳಿಸುವ ವ್ಯವಹಾರದಲ್ಲಿ ಇದೂ ಸೇರಿದೆ. ನಿಂಬೆ ಹುಲ್ಲಿನ ಕೃಷಿ ಮೂಲಕ ನೀವೂ ಆದಾಯ ಗಳಿಸಬಹುದು. ಒಂದು ಹೆಕ್ಟೇರ್ ಪ್ರದೇಶದಲ್ಲಿ ಈ ಕೃಷಿ ಶುರು ಮಾಡಿ, ವರ್ಷದಲ್ಲಿ ಸುಮಾರು 4 ಲಕ್ಷ ರೂಪಾಯಿ ಲಾಭ ಗಳಿಸಬಹುದು.
ಲೆಮನ್ ಗ್ರಾಸ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಮನ್ ಕಿ ಬಾತ್ ನಲ್ಲಿ ಹೇಳಿದ್ದರು. ನಿಂಬೆ ಹುಲ್ಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ನಿಂಬೆ ಹುಲ್ಲಿನಿಂದ ತೆಗೆದ ಎಣ್ಣೆಯನ್ನು ಸೌಂದರ್ಯವರ್ಧಕಗಳು, ಸಾಬೂನುಗಳು, ತೈಲಗಳು ಮತ್ತು ಔಷಧಗಳನ್ನು ತಯಾರಿಸುವ ಕಂಪನಿಗಳು ಬಳಸುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಇದನ್ನು ಬರಪೀಡಿತ ಪ್ರದೇಶಗಳಲ್ಲಿಯೂ ಬೆಳೆಸಬಹುದು. ಇದಕ್ಕೆ ಗೊಬ್ಬರದ ಅವಶ್ಯಕತೆ ಇಲ್ಲ.
ಒಮ್ಮೆ ಬೆಳೆ ಬಿತ್ತಿದರೆ 5-6 ವರ್ಷಗಳ ಕಾಲ ನಿರಂತರವಾಗಿ ಬೆಳೆ ತೆಗೆಯಬಹುದು. ಫೆಬ್ರವರಿಯಿಂದ ಜುಲೈ ನಡುವೆ ನಾಟಿ ಮಾಡಬೇಕು. ಒಮ್ಮೆ ನಾಟಿ ಮಾಡಿದರೆ ಆರರಿಂದ ಏಳು ಬಾರಿ ಕೊಯ್ಲು ಮಾಡಬಹುದು. ಒಂದು ಲೀಟರ್ ಎಣ್ಣೆಗೆ 1,000 ರಿಂದ 1,500 ರೂಪಾಯಿಯಿದೆ. ಎರಡನೇ ಕಟಾವಿಗೆ 1.5 ಲೀಟರ್‌ನಿಂದ 2 ಲೀಟರ್‌ವರೆಗೆ ಎಣ್ಣೆ ಬರುತ್ತದೆ. ಇದು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಲ್ಲ ಅತ್ಯುತ್ತಮ ಕೃಷಿಯಲ್ಲಿ ಒಂದಾಗಿದೆ.