ಕೊರೊನಾ ಸಂದರ್ಭದಲ್ಲಿ ಜನರು ನೌಕರಿಗಿಂತ ಸ್ವಂತ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ನೀವು ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ ಬಾಳೆಕಾಯಿ ಚಿಪ್ಸ್ ಮಾರಾಟ ಶುರು ಮಾಡಬಹುದು. ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಲೂಗಡ್ಡೆ ಚಿಪ್ಸ್ ಗಿಂತ ಬಾಳೆಕಾಯಿ ಚಿಪ್ಸ್ ಹೆಚ್ಚು ಮಾರಾಟವಾಗುತ್ತದೆ.
ಬಾಳೆಕಾಯಿ ಚಿಪ್ಸ್ ತಯಾರಿಸಿ ದಿನಕ್ಕೆ 4 ಸಾವಿರ ರೂಪಾಯಿವರೆಗೆ ನೀವು ಗಳಿಸಬಹುದು. ಬಾಳೆಕಾಯಿ ಚಿಪ್ಸ್ ಮಾರುಕಟ್ಟೆ ತುಂಬಾ ಚಿಕ್ಕದಾಗಿದೆ. ದೊಡ್ಡ ಕಂಪನಿಗಳು ಚಿಪ್ಸ್ ತಯಾರಿಸುವುದಿಲ್ಲ. ಹಾಗಾಗಿ ನೀವು ಈ ಮಾರುಕಟ್ಟೆ ಪ್ರವೇಶಿಸಿ ಹೆಚ್ಚು ಗಳಿಕೆ ಮಾಡಬಹುದು. ಬಾಳೆಕಾಯಿ ಚಿಪ್ಸ್ ಗೆ ನೀವು ಯಂತ್ರವನ್ನು ಬಳಸಬಹುದು.
ಬಾಳೆಕಾಯಿ ಕ್ಲೀನ್ ಮಾಡುವ ಯಂತ್ರ, ಬಾಳೆಕಾಯಿ ಸಿಪ್ಪೆ ತೆಗೆಯುವ ಯಂತ್ರ, ಬಾಳೆ ಕಾಯಿ ಕತ್ತರಿಸುವ ಯಂತ್ರ, ಮಸಾಲೆ ಮಿಕ್ಸ್ ಮಾಡುವ ಮಶಿನ್, ಪ್ಯಾಕಿಂಗ್ ಮಶಿನ್ ಹೀಗೆ ಅನೇಕ ಮಶಿನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಾಳೆಕಾಯಿ ತಯಾರಿ ಮಶಿನ್ ಗಳನ್ನು https://www.indiamart.com/ ಮತ್ತು https://india.alibaba.com/index.html ವೆಬ್ ಸೈಟ್ ನಲ್ಲಿ ಖರೀದಿಸಬಹುದು.
ಮದ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಅಬಕಾರಿ ಸುಂಕ ಹೆಚ್ಚಳದಿಂದ ದುಬಾರಿಯಾಗಲಿದೆ ಲಿಕ್ಕರ್
50 ಕೆಜಿ ಚಿಪ್ಸ್ ತಯಾರಿಸಲು, ಕನಿಷ್ಠ 120 ಕೆಜಿ ಕಚ್ಚಾ ಬಾಳೆಹಣ್ಣುಗಳು ಬೇಕಾಗುತ್ತವೆ. ಸುಮಾರು 1000 ರೂಪಾಯಿಗೆ 120 ಕೆಜಿ ಕಚ್ಚಾ ಬಾಳೆಕಾಯಿ ಸಿಗುತ್ತದೆ. ಇದಕ್ಕೆ 12 ರಿಂದ 15 ಲೀಟರ್ ಎಣ್ಣೆ ಬೇಕಾಗುತ್ತದೆ. 70 ರೂಪಾಯಿ ಪ್ರಕಾರ 15 ಲೀಟರ್ ಎಣ್ಣೆಗೆ 1050 ರೂಪಾಯಿಯಾಗುತ್ತದೆ. ಚಿಪ್ಸ್ ಫ್ರೈಯರ್ ಯಂತ್ರವು 1 ಗಂಟೆಯಲ್ಲಿ 10 ರಿಂದ 11 ಲೀಟರ್ ಡೀಸೆಲ್ ಬಳಸಿಕೊಳ್ಳುತ್ತದೆ. 1 ಲೀಟರ್ ಡೀಸೆಲ್ ಬೆಲೆ 80 ರೂಪಾಯಿಯಾದ್ರೆ 11 ಲೀಟರ್ ಗೆ 900 ರೂಪಾಯಿಯಾಗುತ್ತದೆ. ಉಪ್ಪು ಮತ್ತು ಮಸಾಲೆಗಳಿಗೆ ಗರಿಷ್ಠ 150 ರೂಪಾಯಿ ಬೇಕಾಗುತ್ತದೆ. 50 ಕೆಜಿ ಚಿಪ್ಸ್ ತಯಾರಿಸಲು 3200 ರೂಪಾಯಿ ಬೇಕಾಗುತ್ತದೆ. ಒಂದು ಕಿಲೋ ಚಿಪ್ಸ್ ಪ್ಯಾಕೆಟ್‌ಗೆ 70 ರೂಪಾಯಿ ಆಗುತ್ತದೆ. ಆನ್‌ಲೈನ್‌ನಲ್ಲಿ ಅಥವಾ ಕಿರಾಣಿ ಅಂಗಡಿಗಳಲ್ಲಿ 90-100 ಕೆ.ಜಿ.ಗೆ ಸುಲಭವಾಗಿ ಮಾರಾಟ ಮಾಡಬಹುದು.
1 ಕೆಜಿಗೆ 10 ರೂಪಾಯಿಗಳ ಲಾಭ ಹಿಡಿದ್ರೆ ನೀವು ಸುಲಭವಾಗಿ ದಿನಕ್ಕೆ 4000 ರೂಪಾಯಿಗಳನ್ನು ಗಳಿಸಬಹುದು. ತಿಂಗಳಲ್ಲಿ 25 ದಿನ ಕೆಲಸ ಮಾಡಿದರೆ ತಿಂಗಳಿಗೆ 1 ಲಕ್ಷ ರೂಪಾಯಿಗಳನ್ನು ಗಳಿಸಬಹುದು.