ಹೊಸ ಬ್ಯುಸಿನೆಸ್ ಮಾಡಲು ಬಯಸಿದ್ದರೆ ನಿಮಗೊಂದು ಅವಕಾಶವಿದೆ. ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉತ್ತಮ ಹಣ ಗಳಿಸಬಹುದು. ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಗೆ ಹೊಸ ಪರ್ಯಾಯವನ್ನು ಸರ್ಕಾರ ತಂದಿದೆ. ಇದಕ್ಕೆ ಪರ್ಯಾಯವಾಗಿ ಎಂಎಸ್‌ಎಂಇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾದಿ ಗ್ರಾಮ ಕೈಗಾರಿಕಾ ಆಯೋಗವು ಬಿದಿರಿನ ಬಾಟಲಿಗಳನ್ನು ತಯಾರಿಸುತ್ತಿದೆ.
ಈ ಬಿದಿರಿನ ಬಾಟಲಿಯ ಕನಿಷ್ಠ ಸಾಮರ್ಥ್ಯ 750 ಮಿಲಿ. ಇದರ ಬೆಲೆ 300 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಬಾಟಲಿಗಳು ಪರಿಸರ ಸ್ನೇಹಿ ಮತ್ತು ಬಾಳಿಕೆ ಬರುವಂತವು. ಕಳೆದ ವರ್ಷ ಅಕ್ಟೋಬರ್ 2 ರಿಂದ ಖಾದಿ ಅಂಗಡಿಗಳಲ್ಲಿ ಈ ಬಾಟಲಿಯ ಮಾರಾಟ ಪ್ರಾರಂಭವಾಗಿದೆ.
ಈ ವ್ಯವಹಾರವನ್ನು ಪ್ರಾರಂಭಿಸಲು, ವಿಶೇಷ ಕೌಶಲ್ಯ ಮತ್ತು ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ. ವ್ಯವಹಾರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿದರೆ ಹೆಚ್ಚು ವೆಚ್ಚವಾಗುತ್ತದೆ. ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸಲು, ನೀವು 1,70,000 ರೂಪಾಯಿ ಮೌಲ್ಯದ ಕಚ್ಚಾ ವಸ್ತುಗಳನ್ನು ಖರೀದಿಸಬೇಕು.
https://www.kviconline.gov.in/pmegp/pmegpweb/docs/commonprojectprofile/BAMBOO%20ARTICLE%20MANUFACTURING%20UNIT.pdf ನಲ್ಲಿ ಈ ಬಗ್ಗೆ ಎಲ್ಲ ಮಾಹಿತಿ ಲಭ್ಯವಿದೆ. ಕೇಂದ್ರ ಸರ್ಕಾರ ಕೂಡ ಈ ವ್ಯವಹಾರಕ್ಕೆ ಸಾಲ ಸೌಲಭ್ಯ ನೀಡುತ್ತದೆ. ಕೇವಲ ಬಾಟಲಿ ಮಾತ್ರವಲ್ಲದೆ ಇತರ ಅಲಂಕಾರಿಕ ವಸ್ತುಗಳು ಹಾಗೂ ಪಿಠೋಪಕರಣಗಳನ್ನು ನೀವು ತಯಾರಿಸಬಹುದು.